ಕುಂದಾಪುರ, ಮೇ 30 (DaijiworldNews/SM): ಭಾರಿ ಸಂಚಲನ ಮೂಡಿಸಿದ್ದ ಶಿಲ್ಪಾ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಹಾಗೂ ಸಹಕರಿಸಿದ ಆರೋಪಿಯನ್ನು ಬಂಧಿಸಲಾಗಿದ್ದು. ಪ್ರಮುಖ ಆರೋಪಿಯನ್ನು 7 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದೆ.
ಮೂಡುಗೋಪಾಡಿಯ ಅಜೀಜ್ (32) ಹಾಗೂ ಆರೋಪಿಗೆ ಸಹಕರಿಸಿದ ರಹೀಮ್ (34) ಎನ್ನುವವರನ್ನು ಸೋಮವಾರ ಬೆಳಿಗ್ಗೆ ಹೆಮ್ಮಾಡಿಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಗೆ ಅಜೀಜ್ ಗೆ ಜೂ.6 ರವರೆಗೆ ಪೊಲೀಸ್ ಕಸ್ಟಡಿ ಹಾಗೂ ರಹೀಮ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಡಿವೈಎಸ್ಪಿ ಶ್ರೀಕಾಂತ ಕೆ, ಸರ್ಕಲ್ ಇನ್ಸಪೆಕ್ಟರ್ ಗೋಪಿಕೃಷ್ಣ, ಉಪ ನಿರೀಕ್ಷಕರಾದ ಶ್ರೀಧರ ನಾಯಕ್, ಸದಾಶಿವ ಗವರೋಜಿ ನೇತ್ರತ್ವದ ಪೊಲೀಸರ ತಂಡ ಆರೋಪಿಯ ಪತ್ತೆಯಾಗಿ ಬಲೆ ಬೀಸಿತ್ತು.