ಕಾಸರಗೋಡು, ಮೇ 30 (DaijiworldNews/DB): ಎಂಡೋಸಲ್ಫಾನ್ ಸಂತ್ರಸ್ಥೆ ಪುತ್ರಿಯನ್ನು ಕೊಲೆಗೈದು ತಾಯಿ ಆತ್ಮಹತ್ಯೆಗೈದ ದಾರುಣ ಘಟನೆ ರಾಜಪುರ ಸಮೀಪದ ಚಾಮುಂಡಿಕುನ್ನು ಎಂಬಲ್ಲಿ ನಡೆದಿದೆ.
ಚಾಮುಂಡಿಕುನ್ನುವಿನ ವಿಮಲಕುಮಾರಿ ( 58) ಮತ್ತು ಪುತ್ರಿ ರೇಶ್ಮಾ ( 28) ಮೃತಪಟ್ಟವರು.
ಸೋಮವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮೃತದೇಹಗಳನ್ನು ಜಿಲ್ಲಾಸ್ಪತ್ರೆಯಲ್ಲಿರಿಸಲಾಗಿದೆ. ರಾಜಪುರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821