ನವದೆಹಲಿ, ಜ 09(SM): ಮೇಲ್ಜಾತಿಗಳ ಹಾಗೂ ಸಾಮಾನ್ಯ ವರ್ಗದ ಬಡವರಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲು ಒದಗಿಸುವ ಸಂವಿಧಾನ ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆಯ ನಂತರ ಈಗ ರಾಜ್ಯಸಭೆಯಲ್ಲೂ ಅಂಗೀಕಾರ ದೊರೆತಿದೆ.
ಬುಧವಾರ ತೀವ್ರ ಚರ್ಚೆಯ ನಂತರ ರಾಜ್ಯಸಭೆಯಲ್ಲಿ ಮತಕ್ಕೆ ಹಾಕಿದಾಗ ವಿಧೇಯಕ ಪಾಸ್ ಆಗಿದೆ.ತೀವ್ರ ಕುತೂಹಲ ಮೂಡಿಸಿದ್ದ ಎನ್ ಡಿಎ ಸರಕಾರದ ಮೇಲ್ಜಾತಿ ಮೀಸಲು ವಿದೇಯಕ ಎರಡೂ ಸದನದಲ್ಲಿ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಇದು ಕಾನೂನು ನೀತಿಯಾಗಿ ರೂಪುಗೊಳ್ಳಲಿದೆ.
ಉದ್ಯೋಗ, ಶಿಕ್ಷಣದಲ್ಲಿ ಸಾಮಾನ್ಯ ವರ್ಗದ ಬಡವರಿಗೂ ಮೀಸಲಾತಿ ದೊರೆಯಲಿದೆ. ಅಚ್ಚರಿ ಎಂದರೆ ಚರ್ಚೆ ಸಂದರ್ಭ ವಿದೇಯಕವನ್ನು ವಿರೋಧಿಸಿದ್ದ ಕಾಂಗ್ರೆಸ್ ಕೂಡ ಮತದಾನ ವೇಳೆ ವಿಧೇಯಕ ಪರವಾಗಿ ಮತ ಚಲಾಯಿಸಿದೆ.
ಸದನದಲ್ಲಿ ವಿಧೇಯಕ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಇದು ಕಾನೂನು ನೀತಿಯಾಗಿ ರೂಪುಗೊಳ್ಳಲಿದೆ. ಉದ್ಯೋಗ, ಶಿಕ್ಷಣದಲ್ಲಿ ಸಾಮಾನ್ಯ ವರ್ಗದ ಬಡವರಿಗೂ ಮೀಸಲಾತಿ ದೊರೆಯಲಿದೆ.