ವಿಟ್ಲ, ಮೇ 29 (DaijiworldNews/DB): ಬೈಕ್ಗೆ ಕಾರು ಢಿಕ್ಕಿಯಾದ ಪರಿಣಾಮ ಗಂಭೀರಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವಿಟ್ಲದಲ್ಲಿ ನಡೆದಿದೆ.
ಮೃತರನ್ನು ಕೊಡಿಪ್ಪಾಡಿ ಗ್ರಾಮದ ಅರ್ಕ ನಿವಾಸಿ ಸೇಸಪ್ಪ ನಾಯ್ಕ ಅವರ ಪುತ್ರ ಕಿಶೋರ್ (28) ಎಂದು ಗುರುತಿಸಲಾಗಿದೆ. ಕಿಶೋರ್ ಮೇ 27ರಂದು ತಡರಾತ್ರಿ ತನ್ನ ಸ್ನೇಹಿತನನ್ನು ಕಬಕದಿಂದ ಕಲ್ಲಡ್ಕಕ್ಕೆ ಬಿಟ್ಟು ಹಿಂತಿರುಗುತ್ತಿದ್ದಾಗ ನೇರಳೆಕಟ್ಟೆ ಬಳಿ ಅವರ ಬೈಕಿಗೆ ಕಾರು ಢಿಕ್ಕಿಯಾಗಿದೆ.
ತಲೆಗೆ ಗಂಭೀರ ಗಾಯಗೊಂಡಿದ್ದ ಕಿಶೋರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿದರು.