ಕಾರ್ಕಳ, ಮೇ 28 (DaijiworldNews/HR): ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆಗೈದ ಘಟನೆ ಸಂಭವಿಸಿದೆ.
ಸಾಂದರ್ಭಿಕ ಚಿತ್ರ
ಪೆರ್ವಾಜೆ ಗುದ್ದೆಲ್ ಬಾಕ್ಯಾರು 1ನೇ ಅಡ್ಡ ರಸ್ತೆಯ ನಿವಾಸಿ ಸುನಿತಾ ಕಾಮತ್(69) ಬದುಕಿಗೆ ಅಂತ್ಯ ಹೇಳಿದವರು.
ಮೇ 27ರ ರಾತ್ರಿ ಊಟ ಮುಗಿಸಿ ಮಲಗಿದ ಅವರು ಬೆಳಿಗ್ಗೆ ಮನೆಯಲ್ಲಿ ನಾಪತ್ತೆಯಾಗಿದ್ದರು. ಮನೆ ಮಂದಿ ಹುಡುಕಿದಾಗ ಅವರ ಮೃತ ದೇಹ ಬಾವಿಯಲ್ಲಿ ಪತ್ತೆಯಾಗಿದೆ.
ಇನ್ನು ಮೃತರು ಮಾನಸಿಕ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರಾದರೂ ಗುಣಮುಖಹೊಂದಿರಲಿಲ್ಲ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.