ಕಾಸರಗೋಡು, ಮೇ 28 (DaijiworldNews/HR): ಅಲೆಗಳ ಅಬ್ಬರಕ್ಕೆ ಮೀನುಗಾರಿಕಾ ಬೋಟ್ ಮಗುಚಿ ದಡಕ್ಕೆ ಅಪ್ಪಳಿಸಿದ ಘಟನೆ ಶನಿವಾರ ಕಾಞ೦ಗಾಡ್ನ ಬಲ್ಲ ತೀರದಲ್ಲಿ ನಡೆದಿದ್ದು, ಬೋಟ್ನಲ್ಲಿದ್ದ ಐವರು ಅಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರ ರಾತ್ರಿ ತೈಕಡಪ್ಪುರದಿಂದ ಮೀನುಗಾರಿಕೆಗೆ ತೆರಳಿದ್ದ ಅಲ್ ರಹೀಮ್ ಎಂಬ ಬೋಟ್ ಈ ದುರಂತಕ್ಕೀಡಾಗಿದೆ.
ಬೋಟ್ನಲ್ಲಿದ್ದ ಒಡಿಸ್ಸಾದ ಅಂಜನ್ ಮಲಿಕ್, ವಿಕಾಸ್ ಮಲಿಕ್, ವರುಣ್ ದಾಸ್, ಚೈತ್ರ ದಾಸ್ ಅಪಾಯದಿಂದ ಪಾರಾಗಿದ್ದಾರೆ.
ಇನ್ನು ಬೋಟ್ ಸಂಪೂರ್ಣ ಹಾನಿಗೊಂಡಿದ್ದು, ಎಂಟು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.