ಕಾಸರಗೋಡು, ಮೇ 28 (DaijiworldNews/MS): ರಿಯಲ್ ಎಸ್ಟೇಟ್ ಏಜೆಂಟ್ ರೋರ್ವರನ್ನು ತಂಡವೊಂದು ಅಪಹರಿಸಿದ ಘಟನೆ ಶುಕ್ರವಾರ ಸಂಜೆ ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಗಂಟೆಗಳ ಅವಧಿಯಲ್ಲಿ ಅಪಹರಣ ಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೀರ್ಚಾಲು ಗೋಳಿ ಯಡ್ಕದ ಮೊಯ್ದಿನ್ (49) ಅಪಹರಣ ಕ್ಕಿ ಡಾದ ವ್ಯಕ್ತಿ.ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಚೆಂಗಳ 4 ನೇ ಮೈಲಿನ ಶರೀಫ್(37), ಪಾದೂರಿನ ಜಮಾಲುದ್ದೀನ್(27), ಚೆಂಗಳ ಪಾಣಾರ ಕುಲಂ ನ ಹಕೀಂ(36) ನನ್ನು ಬಂಧಿಸಲಾಗಿದೆ. ಅಪಹರಣಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಣಕಾಸಿನ ವ್ಯವಹಾರ ಅಪಹರಣಕ್ಕೆ ಕಾರಣ ಎಂದು ಪೊಲೀಸರಿಗೆ ಪ್ರಾಥಮಿಕ ಮಾಹಿತಿ ಲಭಿಸಿದೆ. ಬದಿಯಡ್ಕ ಬಸ್ಸು ನಿಲ್ದಾಣ ಪರಿಸರ ದಿಂದ ಮೂವರ ತಂಡ ಬಲವಂತವಾಗಿ ಕಾರಿಗೆ ಹತ್ತಿಸಿ ಅಪಹರಿಸಿದ್ದು, ಇದನ್ನು ಗಮನಿಸಿದ ಸ್ಥಳೀಯರು ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ನೀರ್ಚಾಲು ಮಾನ್ಯ ದಿಂದ ಬಂಧಿಸಿದರು.ಮೊಯ್ದಿನ್ ಕಾಸರಗೋಡು ನಿವಾಸಿ ಯೋರ್ವ ರಿಗೆ ನೀಡಲೆಂದು 60 ಲಕ್ಷ ರೂ. ಸಹಿತ ತೆರಳುತ್ತಿದ್ದಾಗ ಈ ಕೃತ್ಯ ನಡೆದಿದೆ. ಮೊಯ್ದಿನ್ ರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.