ನವದೆಹಲಿ,ಜ 09 (MSP):ಖಾಸಗಿ ಎಫ್ಎಂನಲ್ಲಿ ಇನ್ಮುಂದೆ ಆಕಾಶವಾಣಿಯ ಇಂಗ್ಲಿಷ್ ಹಾಗೂ ಹಿಂದಿ ಸುದ್ದಿಗಳನ್ನು ಪ್ರಸಾರ ಮಾಡಬಹುದು. ಹೌದು.. ಇಷ್ಟು ದಿನ ಸರ್ಕಾರಿ ಆಕಾಶವಾಣಿಯಲ್ಲಿ ಮಾತ್ರ ಪ್ರಸಾರವಾಗುತ್ತಿದ್ದ ವಾರ್ತಾಪ್ರಸಾರವನ್ನು ಇನ್ನು ಮುಂದೆ ಖಾಸಗಿ ಎಫ್ಎಂ ವಾಹಿನಿಗಳಲ್ಲೂ ಪ್ರಸಾರ ಮಾಡಬಹುದು ಎಂದು ಅನುಮತಿ ನೀಡಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ.
" ಇದೊಂದು ಪ್ರಮುಖ ಬೆಳವಣಿಗೆಯಾಗಿದ್ದು ಈ ಮೂಲಕ ಬೃಹತ್ ಜನ ಸಮೂಹವನ್ನು ಆಕಾಶವಾಣಿ ಬಹಳ ಸುಲಭವಾಗಿ ಸುದ್ದಿ ಮೂಲಕ ತಲುಪಲಿದೆ. ಈ ಕ್ರಮದಿಂದ ಪ್ರಜೆಗಳಲ್ಲಿ ಜಾಗೃತಿ ಮೂಡಿಸಿ ಅವರನ್ನು ಸಬಲೀಕರಗೊಳಿಸಲು ಸಾಧ್ಯವಾಗುತ್ತದೆ. ಆಕಾಶವಾಣಿಯ ಈ ಬಹು ಉದ್ದೇಶಿತ ಯೋಜನೆ ಇಂದು ಮಧ್ಯಾಹ್ನದಿಂದ ಜಾರಿಗೆ ಬರಲಿದೆ," ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ್ದಾರೆ.
ಅಕಾಶವಾಣಿಯ ಸುದ್ದಿಗಳನ್ನು ಎಫ್.ಎಂ ಗಳು ಇದ್ದಂತೆ ಬಳಸಿಕೊಳ್ಳಬೇಕಾಗಿದ್ದು, ವಾರ್ತೆ ಮದ್ಯೆ ಪ್ರಸಾರವಾಗುವ ಜಾಹೀರಾತುಗಳನ್ನು ಸಹ ಎಫ್.ಎಂ ವಾಹಿನಿಗಳು ಬಳಸಿಕೊಳ್ಳಬೇಕು ಮುಂತಾದ ನಿಯಮಗಳನ್ನು ವಿಧಿಸಿಲಾಗಿದೆ.