ಕುಂದಾಪುರ, ಮೇ 27 (DaijiworldNews/HR): ಕುಂದಾಪುರದ ಶಿಲ್ಪಾಳ ಸಾವು ಆತ್ಮಹತ್ಯೆ ಅಲ್ಲ. ಅದು ಸ್ಪಷ್ಟ ಲವ್ ಜಿಹಾದ್ ಗಾಗಿ ಪಡೆದ ಬಲಿ. ಆಕೆಯನ್ನು ದೌರ್ಜನ್ಯ ವೆಸಗಿದ ಅಜೀಜ್ ದಂಪತಿಯನ್ನು ಕೂಡಲೇ ಬಂಧಿಸಬೇಕು. ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕು, ಶಿಲ್ಪಾಳ ಕುಟುಂಬಕ್ಕೆ ಸರಕಾರ 10ಲಕ್ಷ ಪರಿಹಾರ ನೀಡಬೇಕೆಂದು ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಆಗ್ರಹಿಸಿದರು.
ಇಂದು ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುಡಿದ ಅವರು, ಕುಂದಾಪುರ ತಾಲೂಕಿನ ಉಪ್ಪಿನಕುದ್ರು ಗ್ರಾಮದ ಶಿಲ್ಪ ಎಂಬ ಹುಡುಗಿಯನ್ನು ಪ್ರೀತಿ ಪ್ರೇಮದ ನಾಟಕವನ್ನಾಡಿ ಅವಳನ್ನು ಅತ್ಯಾಚಾರ ಮಾಡಿ, ಅವಳ ಅಶ್ಲೀಲ ವಿಡಿಯೋ ಚಿತ್ರಿಕರಣ ಫೋಟೋ ತೆಗೆದು ಬ್ಲಾಕ್ಮೇಲ್ ಮಾಡುತ್ತಾ ನಿರಂತರ 2-3 ವರ್ಷಗಳಿಂದ ದೈಹಿಕ ಮಾನಸಿಕ ಹಿಂಸೆಯನ್ನು ಅಜೀಜ್ ದಂಪತಿ ಕೊಡುತ್ತಾ ಇದ್ದು ಇದನ್ನು ತಾಳಲಾರದೆ ಇವರ ಕುಮ್ಮಕ್ಕಿನಿಂದ ಶಿಲ್ಪಾ ಆತ್ಮಾಹತ್ಯೆಗೆ ಶರಣಾಗಿದ್ದಾಳೆ. ಇದಕ್ಕೆ ಕಾರಣ ಅಜೀಜ್ ದಂಪತಿಗಳು ತಕ್ಷಣ ಇವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ನಿರಂತರವಾಗಿ ಕರಾವಳಿ ಭಾಗದಲ್ಲಿ ಈ ರೀತಿಯ ವ್ಯವಸ್ಥಿತ ಲವ್ ಜಿಹಾದ್ ಷಡ್ಯಂತ್ರ ನಡೆಯುತ್ತಿದ್ದು, ಈ ಬಗ್ಗೆ ಸರಕಾರ ತಕ್ಷಣ ಲವ್ ಜಿಹಾದ್ ತಡೆಗೆ ಕಾನೂನು ತರಬೇಕು ಮತ್ತು ಬಡತನದಿಂದಿರುವ ವಿಶ್ವ ಹಿಂದು ಪರಿಷದ್ ಬಜರಂಗದಳ ಆಗ್ರಹಿಸುತ್ತದೆ ಎಂದಿದ್ದಾರೆ.
ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕರಾದ ಸುನಿಲ್ ಕೆ ಆರ್ ಮಾತನಾಡಿ, ಪ್ರಕರಣವನ್ನು ಖಂಡಿಸಿ ಮಂಗಳವಾರದಂದು ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿ ಬೃಹತ್ ಪ್ರತಿಭಟನೆ ನಡೆಯಲಿದೆ. ಲವ್ ಜಿಹಾದ್ ದೇಶಕ್ಕೆ ಹಿಂದೂ ಸಮಾಜ ಮಾರಕ. ಆದಷ್ಟು ಬೇಗ ಲವ್ ಜಿಹಾದ್ ತಡೆಗೆ ಸರಕಾರ ಕಾನೂನು ಜಾರಿ ತರುವಲ್ಲಿ ಕ್ರಮ ವಹಿಸಬೇಕು. ಇದು ಕೇವಲ ಒಂದು ಪ್ರಕರಣವಲ್ಲ, ಅಜೀಜ್ ಇನ್ನು 10-15 ಹೆಣ್ಣು ಮಕ್ಕಳೊಂದಿಗೆ ಸಂಪರ್ಕವಿತ್ತು ಎಂಬ ಮಾಹಿತಿ ಇದೆ. ಈತ ಕಳ್ಳ ಮಾಲು ಸಾಗಾಟದಲ್ಲಿ ಕೇಸು ದಾಖಲಾಗಿತ್ತು. ಹೆಣ್ಣು ಮಕ್ಕಳನ್ನು ಪ್ರೀತಿಸುವ ನೆಪದಲ್ಲಿ ಸಮಾಜ ಘಾತುಕ ಚಟುವಟಿಕೆಗೆ ಬಳಸಿಕೊಳ್ಳಲಾಗುತ್ತಿದೆ . ಇದು ಕೇವಲ ಪ್ರೀತಿ ಪ್ರೇಮ ಅಲ್ಲ . ಇದರ ಹಿಂದೆ ವ್ಯವಸ್ಥಿತ ಸಂಚು ಇದೆ ಇಂತಹ ಘಟನೆ ಕರಾವಳಿಯಲ್ಲಿ ಇನ್ನುಮುಂದೆ ನಡೆಯಬಾರದು ನಮ್ಮ ಕಳಕಳಿ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀಧರ್ ಬಿಜೂರು, ಜಿಲ್ಲಾ ಉಪಾಧ್ಯಕ್ಷರು, ವಿಶ್ವ ಹಿಂದೂ ಪರಿಷದ್ ಉಡುಪಿ, ಗಿರೀಶ್ ಕುಂದಾಪುರ, ಸಂಪರ್ಕ ಪ್ರಮುಖ್, ಸುಧೀರ್ ನಿಟ್ಟೆ, ಜಿಲ್ಲಾ ಸಹ ಕಾರ್ಯದರ್ಶಿ, ಪೂರ್ಣಿಮಾ ಸುರೇಶ್, ಮಾತೃ ಶಕ್ತಿ ಪ್ರಮುಖ, ಪ್ರದೀಪ್ ಮಾರ್ಕೋಡ್, ತಾಲೂಕು ಕಾರ್ಯದರ್ಶಿ ಉಪಸ್ಥಿತರಿದ್ದರು.