ಕುಂದಾಪುರ, ಮೇ 27 (DaijiworldNews/DB): ಲವ್ ಮತ್ತು ಸೆಕ್ಸ್ ಜಿಹಾದ್ಗೆ ಬಲಿಯಾದ ಕುಂದಾಪುರ ತಾಲೂಕಿನ ಉಪ್ಪಿನಕುದ್ರು ನಿವಾಸಿ ಶಿಲ್ಪಾ ಎ. ದೇವಾಡಿಗ ಬರೆದ ಪತ್ರವೊಂದು ಇದೀಗ ಪತ್ತೆಯಾಗಿದ್ದು, ತನ್ನ ಮತ್ತು ಅಜೀಜ್ ನಡುವೆ ನಡೆದಿರುವ ಘಟನೆಗಳನ್ನು ಆಕೆ ಕವನ ರೂಪದಲ್ಲಿ ಬರೆದಿದ್ದಾಳೆ.
ಕೇವಲ ಬಾಹ್ಯ ಸೌಂದರ್ಯಕ್ಕಾಗಿ, ಟೈಮ್ ಪಾಸ್ ಮಾಡಲು ಮಾತ್ರ ನಿಮ್ಮನ್ನು ಪ್ರೀತಿಸುವ ನಾಟಕವಾಡುತ್ತಾರೆ. ಎಲ್ಲವನ್ನೂ ಮಾಡಿ ಐ ಹೇಟ್ ಯೂ ಎನ್ನುತ್ತಾರೆ ಎಂಬುದಾಗಿ ಆಕೆ ಪ್ರೀತಿಯ ಬಗ್ಗೆ ಸುದೀರ್ಘವಾಗಿ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.
ಕೆಲ ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಶಿಲ್ಪಾ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿ ಮೇ 25ರಂದು ಮೃತಪಟ್ಟಿದ್ದಳು. ಪ್ರೀತಿಯ ನಾಟಕವಾಡಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದ ಅಜೀಜ್ ಎಂಬಾತ ಮತ್ತು ಆತನ ಪತ್ನಿಯೇ ಶಿಲ್ಪಾ ಸಾವಿಗೆ ಕಾರಣ ಎಂಬುದಾಗಿ ಶಿಲ್ಪಾ ಕುಟುಂಬಸ್ಥರು ಆರೋಪಿಸಿದ್ದರು.