ಮಂಗಳೂರು, ಮೇ 26 (DaijiworldNews/SM): ಮತಾಂತರ ನಿಷೇಧ ಕಾಯಿದೆ ಲೋಪ-ದೋಷಗಳಿಂದ ಕೂಡಿದೆ. ಈ ಹೊಸ ಕಾಯಿದೆಯ ಪ್ರಕಾರ ಶಿಕ್ಷಣ, ಆರೋಗ್ಯ, ಸೇವೆಯ ಹೆಸರಿನಲ್ಲಿ ಆಮಿಷ ತೋರಿ ಮತಾಂತರ ಮಾಡಬಾರದು ಎಂದು ಉಲ್ಲೇಖಿಸಲಾಗಿದ್ದು, ಇದು ಬಡವರಿಗೆ ಅನ್ಯಾಯವೆಸಗಲಿದೆ ಎಂದು ಅವರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಾಥಾಶ್ರಮ, ವೃದ್ಧಾಶ್ರಮಗಳು ಉಚಿತ ಸೇವೆ ಸಲ್ಲಿಸುತ್ತಿವೆ. ಕೆಲವು ಸಂಸ್ಥೆಗಳು ಶಿಕ್ಷಣ ಶುಲ್ಕದಲ್ಲಿ ಬಡವರಿಗೆ ರಿಯಾಯಿತಿ, ಉಚಿತ ಆರೋಗ್ಯ ಸೇವೆ ಕೂಡಾ ಮಾಡುತ್ತಿವೆ. ಹೀಗೆ ಮಾಡುವಾಗ ಜಾತಿ, ಧರ್ಮಗಳನ್ನು ನೋಡದೇ ಮಾಡುತ್ತಾರೆ. ಆದರೆ ಕಾಯಿದೆಯಡಿ ಮತಾಂತರ ಆರೋಪದಲ್ಲಿ ದೂರು ನೀಡಬಹುದು. ಉಚಿತ ಸೇವೆಯನ್ನೇ ಆಮಿಷವೆಂದೂ ಬಿಂಬಿಸಿ ದೂರು ನೀಡಬಹುದು. ಇದರಿಂದ ಎಲ್ಲಾ ಸಮುದಾಯದ ಬಡವರಿಗೆ ನಿರ್ಗತಿಕರಿಗೆ ಅನ್ಯಾಯವಾಗುತ್ತದೆ.
ಬಿಜೆಪಿ ಸರಕಾರದ ಧರ್ಮ ಜಾತಿ ಹೆಸರಿನಲ್ಲಿ ಸಮಾಜ ಒಡೆಯುವ ಯತ್ನ ಮಾಡುತ್ತಿದೆ. ಈ ಮತಾಂತರ ಕಾನೂನನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದು ಮಂಗಳೂರಿನಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೋ ಆಗ್ರಹಿಸಿದ್ದಾರೆ.