ಮಂಗಳೂರು, ಜ 09 (MSP): ಹತ್ತು ಕಾರ್ಮಿಕ ಒಕ್ಕೂಟಗಳು ಕೇಂದ್ರ ಸರಕಾರದ ಹಲವು ನೀತಿ ಖಂಡಿಸಿ, ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರೆ ನೀಡಿರುವ ೨ ದಿನಗಳ ಭಾರತ್ ಬಂದ್ಗೆ ಕರೆ ದ.ಕ ಜಿಲ್ಲೆಯಲ್ಲಿ 2 ದಿನ ನೀರಸ ಪ್ರಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಬುಧವಾರವೂ ಬಂದ್ ಗೆ ಕರೆ ನೀಡಲಾಗಿದ್ದರೂ ದ.ಕ ಉಡುಪಿ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಿಲ್ಲ. ಈ ಹಿನ್ನಲೆಯಲ್ಲಿ ಎಂದಿನಂತೆ ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳುತೆರಳುತ್ತಿದ್ದಾರೆ.
ಜಿಲ್ಲೆಯಾದ್ಯಂತ ಇಂದು ಎಂದಿನಂತೆ ವಾಹನ ಸಂಚಾರಎಂದಿನಂತೆ ಆರಂಭಗೊಂಡಿದೆ. ಖಾಸಗಿ ಬಸ್ ಗಳು ಹಾಗೂ ಕೆ ಎಸ್ ಆರ್ ಟಿಸಿ ಬಸ್ ಗಳು ರಸ್ತೆಗಿಳಿದಿದ್ದು, ಆಟೋ ರಿಕ್ಷಗಳು ಎಂದಿನಂತೆ ಸಂಚಾರ ಆರಂಭಿಸಿದೆ.
ಇನ್ನು ಮಂಗಳೂರಿನ ಕೆಲವು ವೃತ್ತಗಳಲ್ಲಿ ಇಂದು ಮುಂಜಾನೆಯ ಸಮಯದಲ್ಲಿ ಟಯರ್ ಗಳುಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ನಗರದ ಕಂಕನಾಡಿ, ಬಲ್ಮಠ ವೃತ್ತಗಳಲ್ಲಿ ಟಯರ್ ಗೆ ಬೆಂಕಿ ಹಚ್ಚಲಾಗಿದೆ. ಬಳಿಕ ಪೊಲೀಸರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.