ಸುಳ್ಯ ಅ23 : ಇಲ್ಲಿನ ಮಹಿಳಾ ಸಮಾಜ ಅನೇಕ ವಿದ್ಯಾರ್ಥಿಗಳಿಗೆ ಉದ್ಯೋಗಸ್ಥರಿಗೆ ಆಶ್ರಯ ತಾಣವಾಗಿದ್ದು ಇದರ ನೂತನ ಕಟ್ಟಡ ಅ.27 ಶುಕ್ರವಾರಂದು ಲೋಕಾರ್ಪಣೆಯಾಗಲಿ ಎಂದು ಮಹಿಳಾ ಸಮಾಜದ ಅಧ್ಯಕ್ಷೆ ಹರಿಣಿಸದಾಶಿವ ತಿಳಿಸಿದ್ದಾರೆ. ಅವರು ಸುಳ್ಯದ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು .ಸಂಸದ ನಳೀನ್ಕುಮಾರ್ ಕಟೀಲ್,ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ,ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾದವ, ಜಿಲ್ಲಾ ಪಂಚಾಯತ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷ ಶಾಸಕ ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂಸ್ಥೆಯನ್ನು ದಿ.ಜಾನಕಿ ವೆಂಕಟ್ರಮಣ,ದೇವಕಿ ಎಂ.ವಿ ಅವರಿಂದ ಪ್ರಾರಂಭಿಸಲ್ಪಟ್ಟ ಈ ಸಂಸ್ಥೆಯನ್ನು ಕಾವೇರಮ್ಮ,ಸುನಾಲಿನಿ ಪ್ರಭು,ನೇತ್ರಾವತಿ ಪಡ್ಡಂಬೈಲು, ದೇವಿಕುಮಾರಿ ಪಡ್ಡಂಬೈಲು ಇತರರು ಮುನ್ನಡೆಸಿದ್ದಾರೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪೂರ್ವಧ್ಯಕ್ಷೆ ನೇತ್ರಾವತಿ ಪಡ್ಡಂಬೈಲು ಇತರರು ಉಪಸ್ಥಿತರಿದ್ದರು.