ಉಡುಪಿ, ಮೇ 25 (DaijiworldNews/MS): ಸ್ಯಾಂಡ್ ಆಪ್ ಮುಖಾಂತರ ಜಿಲ್ಲಾಡಳಿತ ಜನತೆಗೆ ಮೋಸ ಮಾಡಿದ್ದು, ಸಿಆರ್ ಜಡ್ ವ್ಯಾಪ್ತಿಯ ಮರಳುಗಾರಿಕೆಯಲ್ಲಿ ಬೃಹತ್ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಲಾರಿ ಮಾಲಕರ ಸಂಘ ಕಟಪಾಡಿಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಅವರು ಇಂದು ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುರ್ರಾ" ಈಗಾಗಲೇ ಮರಳುಗಾರಿಕೆ ನಿಷೇಧದಿಂದ ಸಾಮಾನ್ಯ ಜನರ ಬದುಕು ಬೀದಿಗೆ ಬಂದು ನಿಂತಿದೆ. ಸಿ ಆರ್ ಜಡ್ ಮರಳುಗಾರಿಕೆ ಮುಂದೆ ಪ್ರಾರಂಭವಾಗುವುದೇ ಸಂಶಯ. ಹಿಂದಿನ ಜಿಲ್ಲಾಧಿಕಾರಿಗಳು ಮರಳು ದಂಧೆ ನಡೆಯುತ್ತಿದ್ದಾಗ ರಾತ್ರೋ ರಾತ್ರಿ ಅಡ್ಡೆಗೆ ದಾಳಿಮಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಅದೆಷ್ಟೋ ಕಡೆ ಅಕ್ರಮವಾಗಿ ದಂಧೆ ನಡೆಯುತ್ತಿದ್ದರೂ ಏನು ಕ್ರಮ ಜರುಗಿಸುತ್ತಿಲ್ಲ. ಅಧಿಕಾರಿಗಳು ರಾತ್ರಿ ವೇಳೆ ಹೊರಗೆ ಬರಲಿ, ಅಕ್ರಮವನ್ನು ತಡೆಯಲಿ ಜಿಲ್ಲೆಯಲ್ಲಿ ಮರಳುಕಳ್ಳಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಸಾವಿರ ಸಾವಿರ ಲೋಡ್ ಮರಳು ಅಕ್ರಮವಾಗಿ ಶೇಖರಣೆ ಮಾಡಿಕೊಳ್ಳಲಾಗುತ್ತಿದೆ , ಎಂದು ಆರೋಪಿಸಿದರು
"ನೀವು ಮಾಡಿ, ನಮಗೂ ಕೊಡಿ' ಎನ್ನುವ ಗಣಿ ಇಲಾಖೆಯ ಅಧಿಕಾರಿಗಳು ದಂಧೆಕೋರರನ್ನು ಪೋಷಿಸುತ್ತಿದ್ದಾರೆ. ಲಕ್ಷಾಂತರ ರೂಪಾಯಿ ರಾಯಧನ ಕೊಡದೆ, ಸರಕಾರಕ್ಕೆ ವಂಚನೆ ಮಾಡುತ್ತಿದ್ದಾರೆ ಇದೆ ರೀತಿ ಅಕ್ರಮ ಮುಂದುವರಿದರೆ ಜಿಲ್ಲಾಡಳಿತ ಕಚೇರಿ ಎದುರು ಉಪವಾಸ ಧರಣಿ ಕುಳಿತುಕೊಳ್ಳುತ್ತೇನೆ , ಎಂದು ಎಚ್ಚರಿಕೆ ನೀಡಿದರು.
2020ನೇ ಸಾಲಿನಿಂದ 2021/22ನೇ ಸಾಲಿನ ವರೆಗಿನ ಉಡುಪಿ ಜಿಲ್ಲೆಯ ಸಿಆರ್ ಝಡ್ ಮರಳುಗಾರಿಕೆಯಲ್ಲಿ ದೊಡ್ಡ ಮಟ್ಟದ ಕಾನೂನು ಉಲ್ಲಂಘನೆ ಕರ್ತವ್ಯ ಲೋಪ ಹಾಗೂ ಅವ್ಯವಹಾರಗಳು ನಡೆದಿರುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟಂತೆ ಉನ್ನತ ಮಟ್ಟದ ಅಧಿಕಾರಿಗಳ ತಂಡವನ್ನು ರಚಿಸಿ ಸಮಗ್ರ ತನಿಖೆಗೊಳಪಡಿಸಬೇಕು. ಒಂದು ವೇಳೆ ತನಿಖೆಗೆ ಒಳಪಡಿಸಿದಲ್ಲಿ ಮೇಲ್ಕಾಣಿಸಿದ ಇಲಾಖೆ ಹಾಗೂ ಅಧಿಕಾರಿಗಳ ಅಕ್ರಮ ಭ್ರಷ್ಟಾಚಾರಗಳು ಇನ್ನಷ್ಟು ಬಯಲಾಗುವ ಸಾಧ್ಯತೆ ಇರುವುದರಿಂದ ಈ ಕೂಡಲೇ ಮೇಲ್ಕಾಣಿಸಿದ ಅಧಿಕಾರಿಗಳನ್ನು ಅಮಾನತ್ತಿನಲ್ಲಿಟ್ಟು ಸಮಗ್ರ ತನಿಖೆ ನಡೆಸಬೇಕು. ಇಲಾಖೆಯಲ್ಲಿ ಇನ್ನೂ ಹಲವು ಅಧಿಕಾರಿಗಳು ಅಕ್ರಮ/ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಸಾಧ್ಯತೆಗಳು ಇರುವುದರಿಂದ ತಪ್ಪಿತಸ್ಥ ಭ್ರಷ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ನ್ಯಾಯಾಂಗ ಬಂಧನಕ್ಕೊಳಪಡಿಸಬೇಕೆಂದುತ್ ಎಂದು ಒತ್ತಾಯಿಸಿದರು.
ಈ ಘಟನೆಯನ್ನು ನಿರ್ಲಕ್ಷಿಸಿ ಉನ್ನತ ಸಮಿತಿಯಿಂದ ತನಿಖೆಗೆ ಒಳಪಡಿಸದೆ ಸೃಷ್ಟಿಕರಣ ಕೊಡಿಸದ ಇದ್ದಲ್ಲಿ ಸಂಘಟನೆಯ ಸರ್ವ ಸದಸ್ಯರ ಅಭಿಪ್ರಾಯದ ಮೇರೆಗೆ ಕಾನೂನು ಹೋರಾಟ ಮಾಡುವುದರೊಂದಿಗೆ ಉಡುಪಿ ಜಿಲ್ಲೆಯ ಸರ್ವ ಸಂಘಟನೆಗಳೊಂದಿಗೆ ಸೇರಿ ಬೃಹತ್ ಮಟ್ಟದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು
ಚಂದ್ರ ಪೂಜಾರಿ, ಅಧ್ಯಕ್ಷರು, ರಮೇಶ್ ಶೆಟ್ಟಿ, ಅಶೋಕ್ ಕುಲಾಲ್ , ನವೀನ್ ಪಾಲನ್ , ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು