ಮಂಗಳೂರು, ಮೇ 25 (DaijiworldNews/MS): ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಐ ಪೋನ್ ಬುಕ್ ಮಾಡಿದ ವ್ಯಕ್ತಿಯೊಬ್ಬರು 66,000 ರೂ.ವನ್ನು ಕಳೆದುಕೊಂಡು ವಂಚನೆಗೊಳಗಾಗಿರುವ ಘಟನೆ ನಡೆದಿದೆ.
GADGET FACTORY ಎಂಬ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಆನ್ಲೈನ್ನಲ್ಲಿ ಮೊಬೈಲ್ ಖರೀದಿ ಮಾಡುವ ಬಗ್ಗೆ ಬಂದ ಮಾಹಿತಿ ನೋಡಿ ಮೆಸೇಜ್ ಮಾಡಿದ್ದರು. ಬಳಿಕ ಗೂಗಲ್ ಪೇ ವಾಟ್ಸಾಪ್ ನಂಬರ್ ಕಳುಹಿಸಲಾಗಿತ್ತು. ಅದನ್ನು ನಂಬಿದ ಫಿರ್ಯಾದಿದಾರರು ಹೊಸ ಮೊಬೈಲ್ಗೆ ಬುಕ್ ಮಾಡಿ ಮಾ.13ರಿಂದ 17ರ ಮಧ್ಯೆ ಹಂತ ಹಂತವಾಗಿ 66000 ರೂ.ವನ್ನು ಕೆನರಾ ಬ್ಯಾಂಕ್ ಮತ್ತು ಕರ್ಣಾಟಕ ಬ್ಯಾಂಕ್ ಖಾತೆಯಿಂದ ವರ್ಗಾವಣೆಗೊಳಿಸಿದ್ದರು.
ಅನ್ಲೈನ್ ಮೂಲಕ ಮೊಬೈಲ್ ಖರೀದಿಸಲು ಹಣ ಪಾವತಿಸಿದರೂ ಹಣವನ್ನೂ ಮರಳಿಸದೆ ಮೊಬೈಲನ್ನೂ ನೀಡದೆ ವಂಚಿಸಿದ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.