ಕಾಸರಗೋಡು, ಮೇ 24 (DaijiworldNews/SM): ನಾಗರಿಕರನ್ನು ಬೆಚ್ಚಿ ಬೀಳಿಸಿದ್ದ ಕುಖ್ಯಾತ ದರೋಡೆಕೋರನನ್ನು ಕೊಚ್ಚಿಯಿಂದ ಪೊಲೀಸರು ಬಂಧಿಸಿದ್ದಾರೆ. ಮಡಿಕೈಯ ಅಶೋಕ್(30) ಬಂಧಿತ ಆರೋಪಿ.
ಈತನಿಗಾಗಿ ಪೊಲೀಸರು ಕಳೆದ ಎರಡು ತಿಂಗಳಿನಿಂದ ಕಾಡು , ಬೆಟ್ಟ ಸೇರಿದಂತೆ ಹಲವೆಡೆ ಹುಡುಕಾಟ ನಡೆಸಿದ್ದರು . ಡ್ರೋನ್ ಬಳಸಿ ಶೋಧ ನಡೆಸಿದ್ದರು . ಮಾರ್ಚ್ ೯ ರಂದು ಮಡಿಕೈ ಸಮೀಪ ಬಿಜಿತಾ ಎಂಬ ಮಹಿಳೆಯ ತಲೆಗೆ ಬಡಿದು ಚಿನ್ನಾಭರಣವನ್ನು ದೋಚಿದ್ದನು. ಸಮೀಪದ ಕಾಡಿಗೆ ಈತ ,ಪರಾರಿಯಾಗಿದ್ದು, ಬಳಿಕ ಈತನ ಸುಳಿವು ಇರಲಿಲ್ಲ . ಇದರಿಂದ ಕಾಡಿನಲ್ಲಿ ಅವಿತಿರುವ ಬಗ್ಗೆ ಪರಿಸರದ 300 ಎಕೆರೆ ಯಷ್ಟು ಕಾಡು ಹಾಗೂ ಬೆಟ್ಟ ಸೇರಿದಂತೆ ಹಲವೆಡೆ ಶೋಧ ನಡೆಸಿದ್ದರು.
ಇತರ ಸ್ಥಳಗಳಲ್ಲೂ ಈತನಿಗಾಗಿ ತನಿಖೆ ನಡೆಸಿದ್ದರು . ಈ ನಡುವೆ ಸೋಮವಾರ ಸಂಜೆ ಮಡಿಕೈ ಪರಿಸರದ ಕ್ಲಬ್ ವೊಂದರ ಯುವಕರು ಕೊಚ್ಚಿಗೆ ತೆರಳಿದ್ದ ಸಂದರ್ಭದಲ್ಲಿ ಮೊಬೈಲ್ ಅಂಗಡಿಯೊಂದಕ್ಕೆ ಆಗಮಿಸಿದ್ದ ಈತ ಮೊಬೈಲ್ ಫೋನ್ ನ್ನು ಮಾರಾಟಕ್ಕೆ ಯತ್ನಿಸಿದ್ದು , ಈ ಸಂದರ್ಭದಲ್ಲಿ ಯುವಕರು ಸಂಶಯ ಗೊಂಡು ಈತನ ಫೋಟೋ ತೆಗೆದು ಊರಿಗೆ ಕಳುಹಿಸಿದ್ದರು . ಊರಲ್ಲಿದ್ದವರು ಫೋಟೋ ಗಮನಿಸಿ ಅಶೋಕ್ ಎಂಬುದನ್ನು ಖಚಿತಪಡಿಸಿದ್ದು , ಇದರಿಂದ ಪೊಲೀಸರಿಗೆ ಮಾಹಿತಿ ನೀಡಿದರು. ಮಫ್ತಿಯಲ್ಲಿ ಬಂದ ಪೊಲೀಸರು ಹಾಗೂ ಯುವಕರು ಅಶೋಕ್ ನನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಹಲವಾರು ಪ್ರಕರಣಗಳ ಆರೋಪಿಯಾಗಿರುವ ಅಶೋಕ್ ಪೊಲೀಸರಿಗೆ ಸವಾಲಾಗಿದ್ದನು . ಪರಿಸರವಾಸಿಗಳಲ್ಲಿ ಭಯ ಉಂಟು ಮಾಡಿತ್ತು . ಮನೆಗೆ ನುಗ್ಗಿ ಕಳವು ಗೈದ ಬಳಿಕ ಈತ ಕಾಡಿಗೆ ಪರಾರಿಯಾಗುತ್ತಿದ್ದ ದಿನಗಳ ಬಳಿಕ ಇನ್ನೊಂದು ಕಳವು ನಡೆಸುವ ಮೂಲಕ ಪ್ರತ್ಯಕ್ಷವಾಗುತ್ತಿದ್ದ . ಈ ಹಿನ್ನಲೆ ಯಲ್ಲಿ ದಿನಗಳ ಕಾಲ ಪೊಲೀಸರು ಕಾಡು ಕೇಂದ್ರೀಕರಿಸಿ ಶೋಧ ನಡೆಸಿದ್ದರು.