ಉಡುಪಿ, ಮೇ 24 (DaijiworldNews/DB): ಉಡುಪಿ ಕ್ಷೇತ್ರದಲ್ಲಿ ಒಟ್ಟು ಮೂರು ಮಂದಿ ವಿದ್ಯಾರ್ಥಿಗಳು ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿ ಉಡುಪಿಗೆ ಹೆಮ್ಮೆ ತಂದಿದ್ದಾರೆ ಎಂದು ಮಂಗಳವಾರ ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿ ಕುಂಜಿಬೆಟ್ಟುವಿನ ಮೇಸ್ತ್ರಿಯ ಮಗಳಾದ ಗಾಯತ್ರಿ ಮತ್ತು ಮಲ್ಪೆಯ ಬಡತನದಲ್ಲಿ ಕಲಿತ ಪುನೀತ್ ನಾಯಕ್ ಗೆ ನಮ್ಮ ಮನವಿಯ ಮೇರೆಗೆ ಕಾರ್ಕಳದ ಜ್ಞಾನ ಸುಧಾ ಕಾಲೇಜಿನಲ್ಲಿ ಮುಂದಿನ ಎರಡು ವರ್ಷ ಸಿಇಟಿ, ನೀಟ್ ಕೋಚಿಂಗ್ ಸಹಿತವಾಗಿ ಉಚಿತ ಶಿಕ್ಷಣ ನೀಡಲು ಶಾಲಾ ಆಡಳಿತ ಮಂಡಳಿ ಒಪ್ಪಿಕೊಂಡಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಸರ್ಕಾರಿ ಶಾಲೆಯ ಬಗ್ಗೆ ನಿರ್ಲಕ್ಸ್ಯ ಇತ್ತು. ಎಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ಮಕ್ಕಳಿಂದ ಅಪವಾದ ದೂರವಾಗಿದೆ. ಈ ಬಾರಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಫಲಿತಾಂಶ ಚೆನ್ನಾಗಿ ಇರುವುದರಿಂದ ಸರಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಶಾಲೆಯಲ್ಲಿ ಸೀಟು ಕೊಡಿಸುವಂತೆ ಪೋಷಕರ ಬೇಡಿಕೆಯೂ ಬರುತ್ತಿದೆ.ಎಲ್ಲಾ ಶಿಕ್ಷಕ- ಶಿಕ್ಷಕಿಯರಿಗೆ ಪ್ರಯತ್ನಅಭಿನಂದನೀಯೆಂದರು.
ಉಡುಪಿಯ ಸರ್ಕಾರಿ ಬಾಲಕಿಯರ ಕಾಲೇಜು ಇಡೀ ದೇಶದಲ್ಲಿ ಕುಖ್ಯಾತಿಗೆ ಒಳಗಾಗಿತ್ತು. ಆದರೆ ಗಾಯತ್ರಿಯಿಂದಾಗಿ ಮತ್ತೆ ಖ್ಯಾತಿ ಪಡುವಂತಾಗಿದೆ. ಇದು ಗಮನಾರ್ಹ ವಿಷಯ ಎಂದು ಶಾಸಕರು ಹೆಮ್ಮೆ ವ್ಯಕ್ತಪಡಿಸಿದರು.