ಮಂಗಳೂರು, ಮೇ 24 (DaijiworldNews/MS): ತುಳುನಾಡ ಗಾನ ಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನದ ವತಿಯಿಂದ ತುಳುನಾಡಿನ ಕಾರಣಿಕ ದ ಸತ್ಯ ಸ್ವಾಮಿ ಕೊರಗಜ್ಜನ ಭಕ್ತಿಗೀತೆ ವಿಡಿಯೋ ಆಲ್ಬಮ್ ಬಿಡುಗಡೆಗೊಂಡಿತು.
ಪ್ರಥಮ ಬಾರಿಗೆ ಜಗದೀಶ್ ಪುತ್ತೂರು ಕೊರಗಜ್ಜನ ಸಾಹಿತ್ಯ ಬರೆದು ಸಂಗೀತ ನಿರ್ದೇಶನ ಮಾಡಿ ಗಾಯನ ಮಾಡಿರುವ ಧರ್ಮೋದ ಮಣ್ಣುಡ್ ಮೈಮೇಡ್ ಮೇರೇಪಿನ ಸ್ವಾಮಿ ಎನ್ನಜ್ಜಾ... ಅಜ್ಜಾ ಎನ್ನಜ್ಜಾ ಸ್ವಾಮಿ ಕೊರಗಜ್ಜ... ಅಜ್ಜನ ಭಕ್ತಿ ಗಾನ ಕಾಟಿಪಳ್ಳ ದ ಸ್ವಾಮಿ ಕೊರಗಜ್ಜನ ಕಟ್ಟೆಯಲ್ಲಿ ಶ್ರೀ ಕ್ಷೇತ್ರದ ಧರ್ಮ ದರ್ಶಿಗಳು ಆದ ತಿಲಕ್ ರಾಜ್ ಅವರು ಬಿಡುಗಡೆ ಗೊಳಿಸಿದರು.
ಕ್ಷೇತ್ರದಲ್ಲಿ ಅಜ್ಜನ ಹಾಡು ಬಿಡುಗಡೆ ಸಂದರ್ಭದಲ್ಲಿ ಅಜ್ಜನ ಮುಡಿಯಿಂದ ಹೂ ಬೀಳುವ ಮೂಲಕ ಅಜ್ಜನ ಮಹಿಮೆ ಮತ್ತಷ್ಟು ಕೊಂಡಾಡುವಂತೆ ನೆರದ ಭಕ್ತರಲ್ಲಿ ಕಣ್ಣು ತುಂಬಿ ಬಂತು.
ಸಂದೀಪ್ ನಾಯ್ಕ್ ಮತ್ತು ನಮಿತಾ ಶೇರಿಗಾರ್ ಭಕ್ತಿಗೀತೆ ವಿಡಿಯೋ ಆಲ್ಬಮ್ ನಿರ್ಮಾಣ ಮಾಡಿದ್ದಾರೆ. ಸಹ ಗಾಯಕಿರಾಗಿ ಸಮನ್ವಿ ರೈ, ಗಾಯತ್ರಿ ಅಚಾರ್ಯ,ವೈಭವಿ ಆಚಾರ್ಯ,ಸಾಹಿತ್ಯ ಅಚಾರ್ಯ ಹಾಗೂ ಇದರ ಛಾಯಾಗ್ರಹಣ ಅರುಣ್ ರೈ ಪುತ್ತೂರು,ಸಂಕಲನ ಚರಣ್ ಅಚಾರ್ಯ ಮಾಡಿದ್ದಾರೆ.
ಈ ಭಕ್ತಿಗೀತೆ ಈಗಾಗಲೇ ಜಮೆಚ್ಚುಗೆ ಗಳಿಸಿದ್ದು,ಜಗದೀಶ್ ಪುತ್ತೂರು ಯೂಟ್ಯೂಬ್ ನಲ್ಲಿ ಹೆಚ್ಚು ವೀಕ್ಷಣೆ ಪಡಿತಾ ಇದೆ. ಬಿಡುಗಡೆ ಕಾರ್ಯಕ್ರಮ ದಲ್ಲಿ ಗಾಯಕ ಜಗದೀಶ್ ಪುತ್ತೂರು, ಮತ್ತು ಶ್ರೀ ಸಂದೀಪ್ ಕುಮಾರ್ ಹಾಗೂ ಡಾ| ದೀಪಕ್ ಬೋಳಾರ್, ವಿವೇಕ್ ಕದ್ರಿ ಹಾಗೂ ವಸಂತ್ ಶೆಟ್ಟಿ ಹಾಗೂ ವಿಘ್ನೇಶ್ ಸೂರಿಂಜೆ ಹಾಗೂ ಇತರ ಗಣ್ಯರು ಮತ್ತು ಕ್ಷೇತ್ರದ ಭಕ್ತಾದಿಗಳು ಪಾಲ್ಗೊಂಡಿದ್ದರು