ಕಾಸರಗೋಡು, ಜ 07(MSP): ಶತಮಾನ ಕಂಡ ನಿಲ್ದಾಣಗಳಲ್ಲಿ ಒಂದಾಗಿರುವ ಉಪ್ಪಳ ರೈಲು ನಿಲ್ದಾಣ ದ ನಿರ್ಲಕ್ಷ್ಯ ಮುಂದುವರಿದ್ದು ರೈಲು ನಿಲ್ದಾಣದ ಅವಗಣನೆಯ ವಿರುದ್ಧ 'ಸೇವ್ ಉಪ್ಪಳ ರೈಲ್ವೇ ಸ್ಟೇಶನ್' ಎಂಬ ಸಮಿತಿ . ಇದೀಗ ಹೋರಾಟಕ್ಕೆ ದುಮುಕಿದೆ . ರೈಲು ನಿಲ್ದಾಣ ಮತ್ತು ಸ್ಟೇಷನ್ ಮಾಸ್ಟರ್ ಕಚೇರಿ ಅವ್ಯವಸ್ಥೆಗಳ ಗೂಡಂತಾಗಿದೆ.ಹಂಚಿನ ಸೂರು ಹೊಂದಿರುವ ಕಚೇರಿ ಮತ್ತು ಟಿಕೆಟ್ ಕೌಂಟರ್ ಇನ್ನೇನೂ ಬೀಳುವ ಹಂತದಲ್ಲಿದೆ.
ಜಿಲ್ಲೆಯ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶದಲ್ಲಿ ಉಪ್ಪಳವು ಮುಂಚೂಣಿಯಲ್ಲಿದೆ. ವಾಣಿಜ್ಯ ಕೇಂದ್ರವಾಗಿ ಪ್ರಗತಿಯಲ್ಲಿರುವ ಈ ಪ್ರದೇಶದಲ್ಲಿ ಮೂಲ ಸೌಕರ್ಯ ಒದಗಿಸುವ ಮೂಲಕ ಪ್ರಯಾಣಿಕರ ಸುಖೀ ಪ್ರಯಾಣಕ್ಕೆ ಸಹಕಾರಿಯಾಗಬಲ್ಲ ರೈಲು ನಿಲ್ದಾಣದ ಅಭಿವೃದ್ಧಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಉಪ್ಪಳ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕೆಂದು ಸ್ಥಳೀಯರು ನಿರಂತರವಾಗಿ ಬೇಡಿಕೆಯನ್ನು ಮುಂದಿಟ್ಟಿದ್ದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಲೇ ಇದೆ.
ಸ್ಥಳೀಯ ನಾಗರಿಕರು ರೈಲ್ವೇ ಮೇಲ್ದರ್ಜೆಗೆ ಬಯಸಿ ನಾಗರಿಕ ಹೋರಾಟ ಸಮಿತಿಯನ್ನು ರಚಿಸಿದ್ದು, ಕಳೆದ ವರ್ಷ ಸಂಸದರ ಮೂಲಕ ದಕ್ಷಿಣ ರೈಲ್ವೇ ಅಧಿಕಾರಿಗಳಿಗೆ ನಿಲ್ದಾಣವನ್ನು ಮೇಲ್ದರ್ಜೆ ಗೇರಿಸಬೇಕು ಮಾತ್ರವಲ್ಲ ಎಕ್ಸ್ಪ್ರೆಸ್ ರೈಲು ಗಳಿಗೆ ಇಲ್ಲಿ ನಿಲುಗಡೆ ನೀಡಬೇಕೆಂದು ಮನವಿ ಪತ್ರ ನೀಡುವ ಮೂಲಕ ವಿನಂತಿಸಲಾಗಿತ್ತು. ಮೇಲ್ದರ್ಜೆ ಬಯಸಿ ಹಲವು ದಿನಗಳ ಕಾಲ ಪ್ರತಿಭಟನೆಯು ನಡೆದಿತ್ತು.
ಮಂಗಳೂರು ನಗರ ಸಹಿತ ಕಣ್ಣೂರು ಜಿಲ್ಲೆಗಳಿಗೆ ಶಿಕ್ಷಣಕ್ಕೆ ತೆರಳುವ ನೂರಾರು ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥರು ಈ ನಿಲ್ದಾಣವನ್ನು ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ. ಮಂಗಳೂರು ಮತ್ತು ಕಲ್ಲಿಕೋಟೆ ಪ್ರದೇಶಗಳಿಗೆ ತೆರಳಲು ಇಲ್ಲಿನ ಜನಸಾಮಾನ್ಯರು ರೈಲು ಪ್ರಯಾಣವನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಇಂತಹ ಪ್ರಯಾಣಿಕರಿಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಕಲ್ಪಿಸುವುದು ರೈಲ್ವೇ ಇಲಾಖೆಯ ಆದ್ಯ ಕರ್ತವ್ಯವೂ ಆಗಿದೆ. ಪ್ರಸ್ತುತ ನಾಲ್ಕು ಪ್ಯಾಸೆಂಜರ್ ರೈಲುಗಳು, ಮಲಬಾರು ಎಕ್ಸ್ಪ್ರೆಸ್ ರೈಲಿಗೆ ಮಾತ್ರ ಇಲ್ಲಿ ನಿಲುಗಡೆ ಇದೆ. ಮುಂಬಯಿ ಕಡೆಗೆ ತೆರಳುವ ಮತ್ತು ಮುಂಬೈಯಿಂದ ಬರುವ ನೇತ್ರಾವತಿ ಎಕ್ಸ್ಪ್ರೆಸ್ ರೈಲಿಗೆ ಇಲ್ಲಿ ನಿಲುಗಡೆ ಇಲ್ಲ. ಉಳಿದಂತೆ ತಿರುವನಂತರಪುರಕ್ಕೆ ತೆರಳುವ ಮಾವೇಲಿ ಎಕ್ಸ್ಪ್ರೆಸ್ ಸಹಿತ ಎಗ್ಮೋರ್ ಎಕ್ಸ್ಪ್ರೆಸ್ ರೈಲುಗಳಿಗೆ ಉಪ್ಪಳ ರೈಲು ನಿಲ್ದಾಣದಲ್ಲಿ ನಿಲುಗಡೆ ಬೇಕಿದೆ ಎಂದು ಸ್ಥಳೀಯರು ಬೇಡಿಕೆ ಮುಂದಿರಿಸಿದ್ದಾರೆ.
ರೈಲ್ವೇ ಸ್ಟೇಶನ್ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದಿದ್ದ ಅಧಿಕಾರಿಗಳ ಮಾತು ವರ್ಷ ಕಳೆದರೂ ಆರಂಭಗೊಂಡಿಲ್ಲ. ದೂರ ಪ್ರಯಾಣದ ಎಕ್ಸ್ ಪ್ರಸ್ ರೈಲಿಗೆ ಉಪ್ಪಳದಲ್ಲಿ ನಿಲುಗಡೆ ದೊರಕಿಸಬೇಕು. ಭೌತಿಕ ಅಭಿವೃದ್ಧಿಯೆಡೆಗೆ ಗಮನ ಹರಿಸಬೇಕು ಎಂಬ ಬೇಡಿಕೆ ಯನ್ನಿಟ್ಟು ಪ್ರತಿಭಟನೆ ನಡೆಯಲಿದೆ. ಈ ತನಕ ನಾಗರಿಕರು ಸಹಿತ ಸೇವ್ ಉಪ್ಪಳ ರೈಲ್ವೇ ಸ್ಟೇಶನ್ ಹೋರಾಟ ಸಮಿತಿ ವತಿಯಿಂದ ನೀಡಲ್ಪಟ್ಟ ಮನವಿಗಳಿಗೆ ಸೂಕ್ತ ಸ್ಪಂದನೆ ದೊರಕಿಲ್ಲ. ರೈಲ್ವೇ ಪ್ರಯಾಣಿಕರು ಸಹಿತ ಇಲ್ಲಿನ ಕರ್ತವ್ಯ ನಿರತ ಸಿಬಂದಿ ಅಗತ್ಯ ಮೂಲ ಸೌಕರ್ಯಗಳಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ
ರೈಲು ನಿಲ್ದಾಣದ ಪ್ರಗತಿಪರ ಬದಲಾವಣೆಯನ್ನು ಬಯಸಿ ಸ್ಥಳೀಯ ಜನಪ್ರತಿನಿಧಿಗಳು ಸಹಿತ ನಾಗರಿಕರು ಒಟ್ಟಾಗಿ ಸೇವ್ ಉಪ್ಪಳ ರೈಲ್ವೇ ಸ್ಟೇಶನ್ ಎಂಬ ಹೋರಾಟ ಸಮಿತಿ ವರ್ಷದ ಹಿಂದೆ ರಚಿಸಿದ್ದರು. ಮಂಗಳೂರು ಮತ್ತು ಕಲ್ಲಿಕೋಟೆ ಪ್ರದೇಶಗಳಿಗೆ ತೆರಳಲು ಇಲ್ಲಿನ ಜನಸಾಮಾನ್ಯರು ರೈಲು ಪ್ರಯಾಣವನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಇಂತಹ ಪ್ರಯಾಣಿಕರಿಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಕಲ್ಪಿಸುವುದು ರೈಲ್ವೇ ಇಲಾಖೆಯ ಆದ್ಯ ಕರ್ತವ್ಯವೂ ಆಗಿದೆ. ಪ್ರಸ್ತುತ ನಾಲ್ಕು ಪ್ಯಾಸೆಂಜರ್ ರೈಲುಗಳು, ಮಲಬಾರು ಎಕ್ಸ್ಪ್ರೆಸ್ ರೈಲಿಗೆ ಮಾತ್ರ ಇಲ್ಲಿ ನಿಲುಗಡೆ ಇದೆ. ಮುಂಬಯಿ ಕಡೆಗೆ ತೆರಳುವ ಮತ್ತು ಮುಂಬೈಯಿಂದ ಬರುವ ನೇತ್ರಾವತಿ ಎಕ್ಸ್ಪ್ರೆಸ್ ರೈಲಿಗೆ ಇಲ್ಲಿ ನಿಲುಗಡೆ ಇಲ್ಲ. ಉಳಿದಂತೆ ತಿರುವನಂತರಪುರಕ್ಕೆ ತೆರಳುವ ಮಾವೇಲಿ ಎಕ್ಸ್ಪ್ರೆಸ್ ಸಹಿತ ಎಗ್ಮೋರ್ ಎಕ್ಸ್ಪ್ರೆಸ್ ರೈಲುಗಳಿಗೆ ಉಪ್ಪಳ ರೈಲು ನಿಲ್ದಾಣದಲ್ಲಿ ನಿಲುಗಡೆ ಬೇಕಿದೆ ಎಂದು ಸ್ಥಳೀಯರು ಬೇಡಿಕೆ ಮುಂದಿರಿಸಿದ್ದಾರೆ.