ಮಂಗಳೂರು, ಜ 07(MSP): ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸಾವನ್ನಪ್ಪಿದ್ದು ಎಚ್1ಎನ್1 ಸೋಂಕಿನಿಂದ ಅಲ್ಲ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಮಧುಕರ್ ಶೆಟ್ಟಿ ಅವರಿಗೆ ಮಹಾಪಧಮನಿ ಉರಿಯೂತ ಎಂಬ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಅವರಿಸಿಕೊಂಡಿತ್ತು. ಇದು ಸ್ಟ್ರೋಕ್ ನಂತೆ ಹೃದಯಕ್ಕೆ ಕಾಡುವ ಸಮಸ್ಯೆ ಇದಾಗಿರುತ್ತದೆ. ಈ ಬಗ್ಗೆ ಅವರಿಗೆ ಗೊತ್ತೆ ಇರಲಿಲ್ಲ .ಆದರೆ ಮಾಧ್ಯಮಗಳಲ್ಲಿ ಮತ್ತು ಜನರಲ್ಲಿ ಎಚ್1ಎನ್1 ಎಂದು ಗಾಸಿಪ್ ಹಬ್ಬಿತ್ತು. ಅವರಿಗೆ ಯಾವುದೆ ಜ್ವರದ ಸೋಂಕು ತಗುಲಿರಲಿಲ್ಲ. ಎಚ್1ಎನ್1 ಗೆ ಶಸ್ತ್ರಚಿಕಿತ್ಸೆ ನಡೆಸುವುದಿಲ್ಲ ಎಂದು ಮಧುಕರ್ ಶೆಟ್ಟಿ ಸ್ನೇಹಿತ ಮತ್ತು ನಿಟ್ಟೆ ವಿಶ್ವವಿದ್ಯಾಲಯದ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಮಹಾಬಲೇಶ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಮಹಾಪಧಮನಿ ಉರಿಯೂತಕ್ಕೆ ಶಸ್ತ್ರಚಿಕಿತ್ಸೆ ನಡೆದಿದೆ.ಇದು ಅತ್ಯಂತ ಕ್ಲಿಷ್ಟಕರ ಆಪರೇಷನ್ ಆಗಿದ್ದು ಚಿಕಿತ್ಸೆ ವೇಳೆ ಅಪಾರ ಪ್ರಮಾಣದ ರಕ್ತ ಹರಿಯುತ್ತದೆ.ಮಧುಕರ್ ಹಾಗೂ ಒಂದೇ ಊರಿನವರು. ನಾವಿಬ್ಬರೂ ಆತ್ಮೀಯರಾಗಿದ್ದೆವು. ಮನೆಯವರು ಆಟಿಕ್ ಆನಿರಿಸಂನಿಂದ ಸಾವನ್ನಪ್ಪಿದ ಬಗ್ಗೆ ತಿಳಿಸಿದ್ದಾರೆ. ಇದು ಅಪರೂಪದ ಕಾಯಿಲೆ ಸ್ಟ್ರೋಕ್ ನಂತೆ ತಕ್ಷಣ ಚಿಕಿತ್ಸೆ ಪಡೆಯದಿದ್ದರೆ ಅಪಾಯವಿದೆ ತಿಳಿದ್ದಾರೆ.