ಮಂಗಳೂರು, ಮೇ 18 (DaijiworldNews/SM): ಎಸ್ಎಸ್ಎಲ್ ಸಿ ತರಗತಿ ಪಠ್ಯಪುಸ್ತಕದಿಂದ ನಾರಯಣ ಗುರು ಪಠ್ಯ ತೆರವುಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪಠ್ಯಪುಸ್ತಕ ರಚನಾ ಸಮಿತಿಗೆ ಬಿಲ್ಲವ ಸಮಾಜ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುದ್ರೋಳಿ ಗೋಕರ್ನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್, ರಾಯಣ ಗುರು ಕೇವಲ ಒಂದು ವರ್ಗಕ್ಕೆ ಸೀಮಿತ ಅಲ್ಲ. ನಾರಾಯಣ ಗುರು ಸೋಷಿತ ವರ್ಗದ ಜಗದ್ಗುರುವಾಗಿದ್ದರು. ಕೇರಳದಲ್ಲಿ ಹಿಂದೂಗಳ ಮತಾಂತರವನ್ನು ಅವರು ತೆಡೆದಿದ್ದರು. ಹಿಂದೂ ಧರ್ಮದ ಉಳಿಯುವಿಕೆಯಲ್ಲಿ ನಾರಾಯಣ ಗುರುಗಳ ಪಾತ್ರ ಪ್ರಮುಖವಾಗಿದೆ.
ಹಿಂದೂ ಧರ್ಮ ಚದುರಿಸೋದನ್ನು ನಾರಾಯಣ ಗುರುಗಳು ನಿಲ್ಲಿಸಿದರು. ದೇವಸ್ಥಾನಕ್ಕೆ ಸೋಷಿತ ವರ್ಗಕ್ಕೆ ಪ್ರವೇಶ ಇಲ್ಲದಿರುವಾಗ ಸ್ವತಃ ದೇವಸ್ಥಾನ ಕಟ್ಟಿ ಪೂಜೆಗೆ ಅನುವು ಮಾಡಿದರು.
ಸಮಾಜದಲ್ಲಿ ಶಾಂತಿ ನೆಲೆಸಲು ಅವರ ತತ್ವಪಾಲನೆ ಅನಿವಾರ್ಯವಾಗಿತು. ಪ್ರಸ್ತುತ ಸಮಾಜದಲ್ಲಿ ಜನರಿಗೆ ಸುಖ ಶಾಂತಿ ಇಲ್ಲ. ಶಾಂತಿ ಪಾಲಿಸಲು ಗುರುಗಳ ತತ್ವ ಅನಿವಾರ್ಯ. ಪಠ್ಯ ಪುಸ್ತಕ ರಚನಾ ಸಮತಿ ಪಠ್ಯ ತೆಗೆದಿರೋದು ಖಂಡನೀಯ. ಇದೊಂದು ಘೋರ ಅಪರಾಧ ಎಂದು ಅಸಮಾಧಾನ ವ್ಯಕ್ತಪಡಿಸಿದರು.