ಮಂಗಳೂರು, ಜ 07(MSP): ಕರಾವಳಿಯ ಮೀನಿನ ಖಾದ್ಯಕ್ಕೆ ಮನಸೋಲದವರಿಲ್ಲ..! ಹೌದು ಹೆಸರಾಂತ ಗಾಯಕ ಶಂಕರ್ ಮಹಾದೇವನ್ ಅವರು ಕೂಡಾ ಮಂಗಳೂರಿನ ಮೀನಿನ ಸ್ವಾಧಕ್ಕೆ ಮನಸೋತು ಕುಡ್ಲದ ಮೀನಿನ ರುಚಿಯನ್ನು ಹಾಡಿ ಹೊಗಳಿದ್ದಾರೆ.
ಆಳ್ವಾಸ್ ವಿರಾಸತ್ ನಲ್ಲಿ ಭಾನುವಾರ ಸಂಗೀತ ಕಾರ್ಯಕ್ರಮ ನೀಡಲು ಬಂದಿದ್ದ , ಖ್ಯಾತ ಗಾಯಕ ಶಂಕರ್ ಮಹಾದೇವನ್ ಮಧ್ಯಾಹ್ನ ನಗರದ ಬಂದರ್ ರಸ್ತೆಯ ಹೊಟೇಲ್ ನಾರಾಯಣಗೆ ತೆರಳಿ ವಿವಿಧ ಬಗೆಯ ಮೀನಿನ ಖಾದ್ಯಗಳನ್ನು ಸವಿಸಿದ್ದಾರೆ.
ಕುಟುಂಬ ಹಾಗೂ10-15 ಮಂದಿ ತಂಡದೊಂದಿಗೆ ಹೊಟೇಲ್ ಗೆ ತೆರಳಿದ ಅವರು ಅನ್ನ ಸಾರು ಅಂಜಲ್ , ಮಾಂಜಿ ಸಹಿತ ವಿವಿಧ ಮೀನು ಹಾಗೂ ಮಜ್ಜಿಗೆ ಸೇವಿಸಿದ್ದಾರೆ. ಈ ಕುರಿತು ಇನ್ ಸ್ಟಾಗ್ರಾಂನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ಹೊಟೇಲ್ ರುಚಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಜಗತ್ತಿನಲ್ಲಿ ಇಂತಹ ಅದ್ಭುತ ಮೀನಿನ ಖಾದ್ಯ ಬೇರೆಲ್ಲೂ ಸಿಗಲ್ಲೂ ಸಾಧ್ಯವಿಲ್ಲ. ಮಂಗಳೂರಿಗೆ ಬಂದರೆ ಇಲ್ಲಿಗೊಮ್ಮೆ ಭೇಟಿ ನೀಡಿ" ಎಂದಿದ್ದಾರೆ. ಎರಡು ವರ್ಷದ ಹಿಂದೊಮ್ಮೆ ಮಂಗಳೂರಿಗೆ ಬಂದಿದ್ದಾಗ ಮಹದೇವನ್ ನಮ್ಮ ಹೊಟೇಲ್ ಗೆ ಬಂದು ಊಟ ಮಾಡಿದ್ದರು. ಅದನ್ನು ನೆನಪಿಟ್ಟುಕೊಂಡು ಮತ್ತೆ ಭೇಟಿ ನೀಡಿದ್ದಾರೆ ಎಂದು ಹೋಟೇಲ್ ಮಾಲೀಕರು ನೆನೆಪಿಸಿಕೊಳ್ಳುತ್ತಾರೆ.