ಬಂಟ್ವಾಳ, ಮೇ 18 (DaijiworldNews/MS): ವಿಟ್ಲ ಸಮೀಪದ ಅಳಿಕೆ ಎಂಬಲ್ಲಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ಅಳಿಕೆ ಗ್ರಾಮದ ಚಂದಾಡಿ ನಿವಾಸಿ ವಿನಯ ಹೆಗ್ಡೆ - ಸಾಯಿಗೀತಾ ದಂಪತಿಯ ಏಕೈಕ ಪುತ್ರಿ, ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಅಳಿಕೆ ನಿವಾಸಿ ಅನ್ವಿತಾ ಹೆಗ್ಡೆ ಎಂದು ಗುರುತಿಸಲಾಗಿದೆ
ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಅನ್ವಿತಾ ಹೆಗ್ಡೆ ಜೇಸೀಸ್ ಶಾಲೆಯ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಮಂಗಳವಾರ ತಡರಾತ್ರಿ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು, ತೀವ್ರ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಅನ್ವಿತಾ ಸಾವನ್ನಪ್ಪಿದ ಕಾರಣ ಜೇಸೀಸ್ ಶಾಲೆಗೆ ಬುಧವಾರ ರಜೆ ನೀಡಲಾಗಿದೆ.
ಇದ್ದ ಓರ್ವ ಪುತ್ರಿಯನ್ನು ಕಳೆದುಕೊಂಡ ಸಾವಿನ ಮನೆ ಶೋಕದ ಕಡಲಾಗಿದೆ.