ಕಾಸರಗೋಡು, ಜ 06(SM): ಕಾಞ೦ಗಾಡ್ ನೆಹರೂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಪಿ.ವಿ. ಪುಷ್ಪಜಾರವರ ಮನೆ ಮೇಲೆ ದುಶ್ಕರ್ಮಿಗಳು ಕಚ್ಚಾ ಬಾಂಬ್ ಎಸೆದ ಘಟನೆ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ಹಿನ್ನೆಲೆ ಅನಾಹುತ ತಪ್ಪಿದಂತಾಗಿದೆ.
ಮನೆ ಮಂದಿ ಕೊಚ್ಚಿಗೆ ತೆರಳಿದ್ದರು. ಆದಿತ್ಯವಾರ ಸಂಜೆ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಶನಿವಾರ ರಾತ್ರಿ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಎರಡಂತಸ್ತಿನ ಮನೆಯ ಕಿಟಕಿ ಗಾಜುಗಳು ಹಾಗೂ ಗೋಡೆಗೆ ಹಾನಿ ಉಂಟಾಗಿದೆ. ಮನೆಯ ಸಿಟೌಟ್ ನಲ್ಲಿ ಕಚ್ಚಾ ಬಾಂಬ್ ನ ಅವಶೇಷಗಳು ಪತ್ತೆಯಾಗಿವೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಶಬರಿಮಲೆ ಸಂರಕ್ಷಣಾ ಸಮಿತಿಯ ವತಿಯಿಂದ ನಡೆದ ಕಾಸರಗೋಡು ಜಿಲ್ಲಾ ಸಮಿತಿಯ ಕಾಲಿಕಡವುನಲ್ಲಿ ನಡೆದ ಅಯ್ಯಪ್ಪ ಜ್ಯೋತಿ ಕಾರ್ಯಕ್ರಮವನ್ನು ಪುಷ್ಪಜಾ ಉದ್ಘಾಟಿಸಿದ್ದರು. ಇದೇ ಹಿನ್ನೆಲೆ ದುಷ್ಕರ್ಮಿಗಳು ಕೃತ್ಯ ಎಸಗಿರ ಬಹುದೆಂದು ಶಂಕಿಸಲಾಗಿದೆ.