ಬಂಟ್ವಾಳ, ಮೇ 17 (DaijiworldNews/SM): ರಾಜ್ಯದಲ್ಲಿ ನಿರಂತರವಾಗಿ ಹಾಗೂ ಗುಣಮಟ್ಟದ ವಿದ್ಯುತ್ ನೀಡಬೇಕು ಎಂಬ ಅಧ್ಯತೆಯಲ್ಲಿ ಸರಬರಾಜಿನಲ್ಲಿ ಎಲ್ಲಿ ಕೊರತೆಯಾಗಬಾರದು ಎಂಬ ನಿಟ್ಟಿನಲ್ಲಿ ಸಬ್ ಸ್ಟೇಷನ್ ಗಳನ್ನು ಹೆಚ್ಚು ಹೆಚ್ಚು ನಿರ್ಮಾಣ ಮಾಡುತ್ತಿದ್ದೇವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಉಪಸ್ಥಿತಿಯಲ್ಲಿ ಬಂಟ್ವಾಳದ ವಿದ್ಯಾಗಿರಿಯ ಅರ್ಬಿಗುಡ್ಡೆ ಎಂಬಲ್ಲಿ 33/11 ಕೆ.ವಿ. ಗ್ಯಾಸ್ ಇನ್ಸುಲೇಟರ್ ವಿದ್ಯುತ್ ಉಪಕೇಂದ್ರದ ಉದ್ಘಾಟನೆ ನಡೆಸಿ ಮಾಧ್ಯಮ ದವರ ಜೊತೆ ಮಾತನಾಡಿದರು.
ಕೇಂದ್ರದ ಶೇ.60 ಹಾಗೂ ಮೆಸ್ಕಾಂ ನ ಶೇ.40. ಪರ್ಸೆಂಟ್ ವೆಚ್ಚದೊಂದಿಗೆ ಎರಡು ಜಿಲ್ಲೆಗಳಲ್ಲಿ ಇನ್ಸುಲೇಟರ್ ನಾಲ್ಕು ಉಪಕೇಂದ್ರಗಳನ್ನು ಆರಂಭಮಾಡಿದ್ದೇವೆ. ಬಂಟ್ವಾಳ, ಉರ್ವ, ಕೋಟ, ಉದ್ಯಾವರ ನಾಲ್ಕು ಕಡೆಗಳಲ್ಲಿ 39 ಕೋಟಿ ವೆಚ್ಚದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ. ನಾಲ್ಕರಲ್ಲಿ ಪ್ರಥಮವಾಗಿ ಬಂಟ್ವಾಳ ದಲ್ಲಿ 11 ಕೋಟಿ ರೂ ವೆಚ್ಚದಲ್ಲಿ ಉಪಕೇಂದ್ರದ ಉದ್ಘಾಟನೆ ನಡೆದಿದೆ. ಬಂಟ್ವಾಳದ ಸುತ್ತ ಮುತ್ತಲಿನ ಪರಿಸರದ ಸುಮಾರು 14 ಸಾವಿರ ಮನೆಗಳಿಗೆ ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ನೀಡಲು ಅನುಕೂಕವಾಗಿದೆ. ಏಳು ತಿಂಗಳ ಅವಧಿಯಲ್ಲಿ ಕೆ.ಪಿ.ಟಿ.ಸಿ.ಎಲ್ ಹಾಗೂ ಎಸ್ಕಾಂ ನ ನೇತ್ರತ್ವದ ಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ ದೊಡ್ಡ ಪ್ರಮಾಣದಲ್ಲಿ ಸಬ್ ಸ್ಟೇಷನ್ ಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಬೇಡಿಕೆಯ ಮೇಲೆ ಇಂತಹ ಸಬ್ ಸ್ಟೇಷನ್ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕಲ್ಲಿದ್ದಲಿನ ಕೊರತೆ ರಾಜ್ಯಕ್ಕೆ ಆಗದಂತೆ ಕ್ರಮಕೈಗೊಂಡಿದ್ದೇವೆ. ಕಳೆದ 7 ವರ್ಷಗಳ ಬಳಿಕ ಕರ್ನಾಟಕದಲ್ಲಿ 5020 ಮೆಗಾವ್ಯಾಟ್ ಮೊದಲಿನೇ ಬಾರಿಗೆ ಆರಂಭಿಸಿದ್ದೇವೆ.ರಾಯಚೂರು ಮತ್ತು ಬಳ್ಳಾರಿಯ ಎಲ್ಲಾ ಯುನಿಟ್ ಗಳು ಕಾರ್ಯರಂಭವಾಗಿದೆ. ಕಲ್ಲಿದ್ದಲಿನ ನಿರಂತರವಾದ ಸರಬರಾಜು ಆಗುವ ಕಾರಣಕ್ಕಾಗಿ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ವಿದ್ಯುತ್ ಸರಬರಾಜು ಆಗುತ್ತಿದೆ, ತೊಂದರೆಯಾಗದಂತೆ ನಿರ್ವಹಣೆ ಯನ್ನು ಅಧಿಕಾರಿಗಳು ಚೆನ್ನಾಗಿ ಮಾಡಿದ್ದಾರೆ. ಇಲಾಖೆಯಲ್ಲಿ ಹೊಸದಾಗಿ 899 ಮಂದಿ ಹೊಸ ನೇಮಕಾತಿ ಮಾಡಿದೆ, ಹೊಸದಾಗಿ 600 ಕ್ಕೂ ಅಧಿಕ 600 ಕ್ಕೂ ಹೆಚ್ಚು ಜನರ ನೇಮಕಾತಿ ಆರಂಭವಾಗಿದೆ.
ಕೊರತೆಯಿರುವ ಕಡೆಗಳಲ್ಲಿ ತೆಗದುಕೊಳ್ಳುವ ಕೆಲಸ ಪ್ರಾರಂಭ ಮಾಡಿದ್ದೇವೆ. ಹೊಸ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು, 1500 ಜನರಿಗೆ ಕೆ.ಪಿ.ಟಿ.ಸಿ.ಎಲ್ ಮುಖಾಂತರ ನೇಮಕಾತಿ ಗಾಗಿ ಅರ್ಜಿ ಆಹ್ವಾನ ಮಾಡಲಾಗಿದ್ದು, ಮುಂದಿನ ಜೂನ್ ತಿಂಗಳ ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ ಎಂದರು. ಪವರ್ ಮ್ಯಾನ್ ಗಳಿಗೆ 20 ಲಕ್ಷ ಜೀವವಿಮೆ ಇತ್ತು ನಾನು ಬಂದ ಅದನ್ನು 40 ಲಕ್ಷಕ್ಕೆ ಏರಿಸಿದ್ದೇನೆ ಎಂದು ಅವರು ತಿಳಿಸಿದರು.
ವಿದ್ಯುತ್ ಚಾರ್ಜಿಂಗ್ ಸೆಂಟರ್ ಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಕೆಲಸ ಪ್ರಾರಂಭವಾಗಿದೆ. ಜೂನ್ ಮೊದಲನೇ ವಾರದಲ್ಲಿ ಇಡೀ ರಾಜ್ಯದಲ್ಲಿ ವಿದ್ಯುತ್ ಚಾರ್ಜಿಂಗ್ ಸೆಂಟರ್ ಅಭಿಯಾನಕ್ಕೆ ದಿನ ನಿಗದಿ ಮಾಡುತ್ತೇವೆ. ಒಂದು ಸಾವಿರ ಚಾರ್ಜಿಂಗ್ ಸೆಂಟರ್ ಮಾಡುವ ಯೋಜನೆ ಮಾಡಿದ್ದೇವೆ. ಮೆಸ್ಕಾಂ ಇದಕ್ಕೆ ನೊಡಲ್ ಅಧಿಕಾರಿಯಾಗಿ ಮಾಡಿ ಟೆಂಡರ್ ಪ್ರಕ್ರಿಯೆ ಆರಂಭಮಾಡುತ್ತೇವೆ ಎಂದು ಅವರು ಹೇಳಿದರು.