ಭದ್ರಾವತಿ, ಜ 06 (MSP): ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕಾರಣ ದೇವಸ್ಥಾನ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ನೋಟೀಸ್ ಕೊಟ್ಟ ಅರಣ್ಯಾಧಿಕಾರಿಯೊಬ್ಬರಿಗೆ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ ಸಂಗಮೇಶ್ ಅವರು ಕೈ ಕಾಲು ಕತ್ತರಿಸಿ ಹಾಕುತ್ತೇನೆ ಎಂದು ಧಮ್ಕಿ ಹಾಕಿದ ವಿಡಿಯೋ ಬಹಿರಂಗವಾಗಿದೆ.
ಈ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೊಡ್ಲಿಕೆರೆ ಸನಿಹದಲ್ಲಿ ಬರುವ ಅರಣ್ಯದಲ್ಲಿ ದೇವಸ್ಥಾನ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಅರಣ್ಯ ಅಧಿಕಾರಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದಕ್ಕೆ ಶಾಸಕರು ಪೋನ್ ಮೂಲಕ ಬೆದರಿಕೆ ಹಾಕವ ದೃಶ್ಯಾವಳಿಗಳು ಈ ವೀಡಿಯೋದಲ್ಲಿದೆ.
ನೊಟೀಸ್ ಯಾಕೆ ಕೊಟ್ಟೆ,ಇವತ್ತು ಪೂಜೆ ಮಾಡಿದ್ದಾರೆ, ಇನ್ಮೇಲೆ ಯಾರೂ ಅಡ್ಡ ಬರಬಾರದು, ಬಂದ್ರೆ ಕೈ ಕಾಲು ಕತ್ತರಿಸಿ ಹಾಕುತ್ತೇನೆ ಎಂದು ಫೋನ್ನಲ್ಲಿ ಧಮ್ಕಿ ಹಾಕಿದ್ದಾರೆ.ಅರಣ್ಯ ಪ್ರದೇಶ ಅತಿಕ್ರಮಿಸದೆ ಇರುವಂತೆ ಅಧಿಕಾರಿ ನೊಟೀಸ್ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಈ ಬಗ್ಗೆ ಸ್ಥಳೀಯರು ಶಾಸಕರಿಗೆ ದೂರು ನೀಡಿದ್ದರು.