ಉಡುಪಿ, ಜ 06(MSP): 22 ದಿನಗಳ ಹಿಂದೆ ನಾಪತ್ತೆಯಾಗಿರುವ 7 ಮಂದಿ ಉಡುಪಿಯ ಮೀನುಗಾರರನ್ನು ಪತ್ತೆ ಹಚ್ಚಲು ಆಗ್ರಹಿಸಿ ಸಾವಿರಾರು ಮೀನುಗಾರರು ಕಡಲಿಗಿಳಿಯದೆ ಭಾನುವಾರ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇಳಿದ್ದಾರೆ.
ಮಲ್ಪೆಯಿಂದ ಕಾಲ್ನಡಿಗೆಯ ಜಾಥಾಕ್ಕೆ ಮೊಗವೀರ ಮುಖಂಡ ಜಿ .ಶಂಕರ್ ಚಾಲನೆ ನೀಡಿದರು. ಮಲ್ಪೆ ಬಂದರಿನಿಂದ ಹೊರಟ ಸಾವಿರಾರು ಮೀನುಗಾರರು ಕರಾವಳಿ ಬೈಪಾಸ್ನಲ್ಲಿ ತಿರುಗಿ ಮೇಲ್ಸೇತುವೆ ಮೂಲಕ ಅಂಬಲಪಾಡಿ ಬೈಪಾಸ್ಗೆ ಬಂದು ರಾಸ್ತಾ ರೋಕೋ ನಡೆಸಿ ಆಕ್ರೋಶ ಹೊರ ಹಾಕಿದರು. ಈ ಪ್ರತಿಭಟನೆಯಲ್ಲಿ ಮೀನುಗಾರರ ವಿವಿಧ ಸಂಘಟನೆಗಳು, ಸಾವಿರಾರು ಮೀನುಗಾರ ಮಹಿಳೆಯರು, ಮಲ್ಪೆ ಪರಿಸರದ ಅಂಗಡಿಗಳ ಮಾಲೀಕರು, ರಿಕ್ಷಾ ,ಟ್ಯಾಕ್ಸಿ , ಟೆಂಪೊ ಚಾಲಕ ಮಾಲೀಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಇವರೊಂದಿಗೆ ಸಂಸದೆ ಶೋಭಾ ಶೋಭಾ ಕರಂದ್ಲಾಜೆಯೂ ಭಾಗವಹಿಸಿದ್ದರು.
ಡಿ. 13 ರಂದು ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ 7 ಮೀನುಗಾರರು ಹೊತ್ತು ಕಡಳಿಗಿಳಿದಿತ್ತು. ಆದರೆ ಡಿ.15 ರಂದು ಬೋಟ್ ಸಂಪರ್ಕ ಕಡಿದುಕೊಂಡಿತ್ತು., 22 ದಿನಗಳು ಕಳೆದರೂ ಬೋಟ್ ಹಾಗೂ ಮೀನುಗಾರರು ಪತ್ತೆಯಾಗಿಲ್ಲ.