ಮಂಗಳೂರು,ಜ06 (MSP): ನಗರದ ಹೊರವಲಯದ ಸುರತ್ಕಲ್ ನ ಎನ್ ಎಂಪಿಟಿ ಕಾಲನಿ ನಿವಾಸಿ ರಮೇಶ್ ಪೂಜಾರಿ ಮನೆಯಿಂದ ಚಿನ್ನಾಭರಣ ಕಳವು ಮಾಡಿದ ಕುಖ್ಯಾತ ಆರೋಪಿಯನ್ನು ಉತ್ತರ ಉಪವಿಭಾಗ ರೌಡಿ ನಿಗ್ರಹ ದಳ ಪೊಲೀಸರು ಬಂಧಿಸಿದ್ದಾರೆ.
ಅಬೂಬಕ್ಕರ್ ಯಾನೆ ಇತ್ತೆ ಬರ್ಪೆ ಅಬೂಬಕ್ಕರ್
ಚಿಕ್ಕಮಗಳೂರು ನಿವಾಸಿ ಅಬೂಬಕ್ಕರ್ ಯಾನೆ ಇತ್ತೆ ಬರ್ಪೆ ಅಬೂಬಕ್ಕರ್ (62) ಬಂಧಿತ ಆರೋಪಿ. ಆತನಿಂತ ಕಳ್ಳತನ ಮಾಡಿದ ಚಿನ್ನ್ನಾಭರಣಗಳ ಪೈಕಿ 121 ಗ್ರಾಂ ತೋಕದ ಸುಮಾರು 3.50 ಲಕ್ಷ ರೂ ಮೌಲ್ಯದ ಒಡವೆಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ 2 ದ್ವಿಚಕ್ರ ವಾಹನ ವಸಪಡಿಸಲಾಗಿದೆ.
ವಿವಿಧೆಡೆ ಕಳವು ಪ್ರಕರಣ ಆರೋಪಿ: ಆರೋಪಿ 2017 ರಿಂದ ಮುಡುಬಿದಿರೆ, ಬಜ್ಪೆ, ವೇಣೂರು , ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುರಿತು ವಿಚಾರಾಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 15 ದಿನಗಳ ಹಿಂದೆ ಕೋಡಿಕೆರೆಯ ಮನೆಯೊಂದರಿಂದ ಚಿನ್ನಾಭರಣ ಕಳವಾಗಿತ್ತು.ಈತನೇ ಕಳವು ಮಾಡಿರುವ ಬಗ್ಗೆ ಶಂಕೆ ಇದ್ದು ಹೆಚ್ಚಿನ ವಿಚಾರಣೆಗೆ ಪೊಲೀಸರು ಕಸ್ಟಡಿಗೆ ಪಡೆದುಕೊಳ್ಳುವ ಸಾದ್ಯತೆ ಇದೆ. ಇತನ ವಿರುದ್ದ 70 ಕ್ಕೂ ಅಧಿಕ ಕಳ್ಳತನ ಪ್ರಕರಣ ದಾಖಲಾಗಿದೆ
ಇತ್ತೆ ಬರ್ಪೆ ಅಬೂಬಕ್ಕರ್ ವಿರುದ್ದ ಕೇರಳದಲ್ಲೂ ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈತನ ವಿರುದ್ದ ಸುಮಾರು 70ಕ್ಕೂ ಅಧಿಕ ಪ್ರಕರಣ ದಾಖಲಾಗಿದೆ. ಹಗಲಿನಲ್ಲಿ ಮನೆ ಬಳಿಗೆ ತೆರಳಿ ಕಳವು ಸಂಚು ರೂಪಿಸುತ್ತಾನೆ. ರಾತ್ರಿ ವೇಳೆ ಕೃತ್ಯ ಎಸಗುತ್ತಾನೆ . ಮನೆಯವರು ಮಲಗಿರುವಾಗ ಕಿಟಕಿ ಮೂಲಕ ಬಾಗಿಲ ಚಿಲಕ ತೆಗೆದು ಒಳನುಗ್ಗುತ್ತಾನೆ. ಇದಕ್ಕೂ ಮೊದಲು ಗ್ಲಾಸ್ ನೆಲಕ್ಕೆ ಹಾಕಿ ಶಬ್ದ ಮಾಡುತ್ತಾನೆ. ಮನೆಯವರು ಏಳದೇ ಇದ್ದರೆ ಕಳವು ಕೃತ್ಯ ನಡೆಸುತ್ತಾನೆ.ರಮೇಶ್ ಅವರ ಮನೆಯಲ್ಲಿ 45 ನಿಮಿಷ ಕಾಲ ಇದ್ದು ಕಳವು ಮಾಡಿರುವುದು ಸಿಸಿಕ್ಯಾಮಾರಾದಲ್ಲಿ ದಾಖಲಾಗಿದೆ.