ಕಾರ್ಕಳ, ಮೇ 14 (DaijiworldNews/HR): ಸ್ಪೋಟಕಕ್ಕೆ ಬಳಸಲಾಗುವ ಜಿಲಿಟಿನ್ ಪೌಡರ್ ಸಾಗಾಟದ ಗೂಡ್ಸ್ ಲಾರಿಯಲ್ಲಿ ಕಾಣಿಸಿದ ಬೆಂಕಿ ಕಾಣಿಸಿಕೊಂಡಿರುವ ಘಟನೆ ಹೊಸ್ಮಾರಿನಲ್ಲಿ ನಡೆದಿದೆ.
ಘಟನೆಯಲ್ಲಿ ಗೂಡ್ಸ್ ಲಾರಿಯ ಕ್ಯಾಬೀನ್ ಸುಟ್ಟು ಹೋಗಿದ್ದು, ಮೂಡುಬಿದಿರೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳ ಕಾರ್ಯಚರಣೆಯಿಂದ ಬೆಂಕಿ ನಂದಿಸಲಾಗಿದೆ.
ಇನ್ನು ವರಂಗದ ಕೆಲ್ಟಕ್ ಎಕ್ಸ್ಪೋ ಸಂಸ್ಥೆಯಿಂದ ಕುಣಿಗಲ್ ಗೆ ಹೋಗುತ್ತಿದ್ದಾಗ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ.