ಮಂಗಳೂರು, ಜ05(SS): ಸ್ಮಾರ್ಟ್ ಸಿಟಿ ಯೋಜನೆಯಡಿ ಕುದ್ರೋಳಿ ಕಸಾಯಿಖಾನೆ ಆಧುನೀಕರಣಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ.
ಕುದ್ರೋಳಿ ಕಸಾಯಿಖಾನೆಯನ್ನು ಸ್ಥಳಾಂತರಗೊಳಿಸಲು ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದರೂ, ಸ್ಮಾರ್ಟ್ ಸಿಟಿಯ ಅನುದಾನವನ್ನು ಅಕ್ರಮವಾಗಿ ಕಾರ್ಯಾಚರಿಸತ್ತಿರುವ ಕುದ್ರೋಳಿ ಕಸಾಯಿಖಾನೆಯ ನವೀಕರಣದ ಹೆಸರಿನಲ್ಲಿ ಅನುದಾನವನ್ನು ದುರುಪಯೋಗಪಡಿಸುತ್ತಿರುವ ಕ್ರಮದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ನವದೆಹಲಿಯಲ್ಲಿ ಕೇಂದ್ರ ಸರಕಾರದ ಅಹಾರ ಸಂಸ್ಕರಣಾ ಸಚಿವಾಲಯದ ರಾಜ್ಯ ಸಚಿವೆಯಾದ ಸಾಧ್ವಿ ನಿರಂಜನ್ ಜ್ಯೋತಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಮಾನ್ಯ ಶ್ರೀ ನಳಿನ್ ಕುಮಾರ್ ಕಟೀಲು ಇವರ ನೇತ್ರತ್ವದಲ್ಲಿ ಮನವಿಯನ್ನು ಸಲ್ಲಿಸಲಾಗಿದೆ.
ಈ ವೇಳೆ ಗೋಸಂರಕ್ಷಣಾ ಪ್ರಕೋಷ್ಠ ಬಿಜೆಪಿ ಕರ್ನಾಟಕದ ಸಹ ಸಂಚಾಲಕ ಶ್ರೀ ವಿನಯ್ ಎಲ್ ಶೆಟ್ಟಿ, ಕಾರ್ಯಕಾರಿಣಿ ಸದಸ್ಯ ಶ್ರೀ ವಿಜಯ್ ಶೆಟ್ಟಿ ಕುತ್ತೆತ್ತೂರು ಉಪಸ್ಥಿತರಿದ್ದರು.