ಮಂಗಳೂರು, ಡಿ05(SS): ನಗರದಲ್ಲಿ ಸಣ್ಣ ಮಟ್ಟದ ಆಮ್ಲೆಟ್ ಅಂಗಡಿಯ ಮೂಲಕ ಪ್ರಸಿದ್ಧಿ ಪಡೆದ ರಾಮಚಂದ್ರ ಭಂಡಾರಿ ಕಳೆದ ವಾರ ಡಿ. 31ರಂದು ಆಮ್ಲೆಟ್ ಅಂಗಡಿ ಮುಚ್ಚಿದ್ದಾರೆ ಎಂದು ತಿಳಿದುಬಂದಿದೆ.
ವಯೋಸಹಜವಾಗಿ ರಾಮಚಂದ್ರ ಭಂಡಾರಿಯವರಿಗೆ ಅಂಗಡಿ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದು, ಆಮ್ಲೆಟ್ ಅಂಗಡಿ ಮುಚ್ಚಿದ್ದಾರೆ.
ಮಂಗಳೂರಿನಲ್ಲಿ ಆಮ್ಲೆಟ್ ಭಂಡಾರಿ ಎಂದೇ ಪ್ರಸಿದ್ಧಿ ಪಡೆದಿದ್ದ ರಾಮಚಂದ್ರ ಭಂಡಾರಿ ಹಲವಾರು ವರುಷಗಳ ಹಿಂದೆ ಮಣ್ಣಗುಡ್ಡದಲ್ಲಿ ಆಮ್ಲೆಟ್ ಶಾಪ್ ಆರಂಭಿಸಿದ್ದರು. ಆಮ್ಲೆಟ್ ಭಂಡಾರಿ ಎಂದರೆ ಮಂಗಳೂರಿನಲ್ಲಿ ಜನರಿಗೆ ಪರಿಚಿತ ಹೆಸರು. ಅಟೋಮೊಬೈಲ್ ಇಂಜಿನಿಯರಿಂಗ್ನಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದ ಶೆವಗೂರ್ ರಾಮಚಂದ್ರ ಭಂಡಾರಿಯವರು ಆರಂಭದಲ್ಲಿ ಎರಡು ವರ್ಷ ಅಟೋಮೊಬೈಲ್ ಉದ್ಯಮದಲ್ಲಿ ಕೆಲಸ ಮಾಡಿದ್ದರು. ಬಳಿಕ ಸ್ವಂತ ಉದ್ಯಮ ಮಾಡಲು ನಿರ್ಧರಿಸಿದ ಅವರು ಆಮ್ಲೆಟ್ ಶಾಪ್ ಆರಂಭಿಸಿದ್ದರು.
ಆದರೆ ಇದೀಗ ರಾಮಚಂದ್ರ ಭಂಡಾರಿಯವರು ಅನಾರೋಗ್ಯಕ್ಕೆ ತುತ್ತಾಗಿರುವ ಪರಿಣಾಮ, ಆಮ್ಲೆಟ್ ಅಂಗಡಿ ಮುಚ್ಚಿದ್ದಾರೆ.
5ದಶಕಗಳ ಕಾಲ ಆಮ್ಲೆಟ್ ಅಂಗಡಿ ನಡೆಸಿದ ರಾಮಚಂದ್ರ ಭಂಡಾರಿಯವರು ಇಂದು ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ಅಂಗಡಿ ಮುಚ್ಚುವ ಸುದ್ದಿ ಕೇಳಿ ಅಭಿಮಾನಿಗಳಿಗೆ ತೀವ್ರ ಬೇಸರ ತಂದಿದೆ.