ವಿಟ್ಲ, ಮೇ 11 (DaijiworldNews/SM): ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಪ್ರತಿಭಟನೆ ಬುಡೋಳಿ ಜಂಕ್ಷನ್ ನಲ್ಲಿ ನಡೆಯಿತು.
ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಶಾಸಕ ರಾಜೇಶ್ ನಾಯ್ಕ್ ಬೆಂಬಲಿಗರು ಒಂದು ಕಡೆಗೆ ಪರ್ಮಿಟ್ ಪಡೆದು ವಿವಿಧ ಕಡೆಗಳಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡಲಾಗುತ್ತಿದೆ.
ಕಾಂಗ್ರೆಸ್ ಅವಧಿಯಲ್ಲಿ ಮರಳುಗಾರಿಕೆಗೆ ಕಾನೂನು ತಂದಿದ್ದು, ಅದರ ದುರುಪಯೋಗ ನಡೆಯುತ್ತಿದೆ. ರಾಜಾರೋಷವಾಗಿ ಯಂತ್ರಗಳ ಮೂಲಕ ತೆಗೆಯಲಾಗುತ್ತಿದೆ. ನಮ್ಮ ತಡೆಯವರುವ ಯಾರೂ ಎಂದು ರಾಜಾರೋಷವಾಗಿ ತೆಗೆಯಲಾಗುತ್ತಿದೆ. ಇಂತಹ ಮರಳುಗಾರಿಕೆಯಿಂದ ಮಸೀದಿ, ದೇವಸ್ಥಾನಕ್ಕೂ ತೊಂದರೆಯಾಗುತ್ತಿದೆ. ಇದು ದೇವಸ್ಥಾನದ ಅಸ್ಥಿತ್ವದ ಮೇಲೆ ಪರಿಣಾಮ ಬೀಳುತ್ತಿದೆ ಎಂದು ಆರೋಪಿಸಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಫ್ ಕುಮಾರ್ ಶೆಟ್ಟಿ ಮಾತನಾಡಿ, ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿದ್ದು, ಶಾಸಕರಿಗೆ , ಇಲಾಖೆಗೆ ಮಾಮೂಲಿ ಹೋಗುತ್ತಿದೆ. ದುಪ್ಪಟ್ಟು ಹಣ ನೀಡಿ ಬಡವರು ಮರಳು ಖರೀಸುವಂತಾಗಿದೆ. ಜನರಿಗೆ ಪರಿಹಾರ ಒದಗಿಸುವುದು ರಾಜಧರ್ಮವಾಗಿದೆ. ಆದರೆ ಇಲ್ಲಿ ಮರಳಿನಿಂದ ಲಕ್ಷ ಲಕ್ಷಾ ನುಂಗುತ್ತಿದ್ದಾರೆ. ಮರಳು ಅಡ್ಡೆಗೆ ದಾಳಿ ನಡೆಸಿದವರಿಗೆ ವರ್ಗಾವಣೆ ಬೆದರಿಕೆ ಬರುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ , ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಬ್ಲಾಕ್ ನ ಮಾಜಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪಾಣೆಮಂಗಳೂರು ಬ್ಲಾಕ್ ಮಾಜಿ ಅಧ್ಯಕ್ಷ ಅಬ್ಬಾಸ್ ಆಲಿ, ಪಾಣೆ ಮಂಗಳೂರು ಬ್ಲಾಕ್ ಕಾಂಗ್ರಸ್ ಮಹಿಳಾ ವಿಭಾಗದ ಅದಕ್ಷೆ ಜಯಂತಿ ಪೂಜಾರಿ, ಬಂಟ್ವಾಳ ಪುರಸಭಾ ಸದಸ್ಯರು ವಾಸು ಪೂಜಾರಿ, ಬಂಟ್ವಾಳ ತಾ.ಪಂ.ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರು ಸಂಪತ್ ಕುಮಾರ್ ಶೆಟ್ಟಿ, ಮಣಿ ನಾಲ್ಕೂರು ಗ್ರಾ.ಪಂ ಸದಸ್ಯರು ಶಿವಪ್ಪ ಪೂಜಾರಿ, ಮಣಿ ನಾಲ್ಕೂರು ಗ್ರಾ.ಪಂ ಮಾಜಿ ಅಧ್ಯಕ್ಷ ಆದಂ ಕುಂಞಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪಿ.ಎ ರಹೀಂ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಮಾನಾಥ್ ಶೆಟ್ಟಿ ಪೆರ್ನೆ, ಬಂಟ್ವಾಳ ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ, ಮಾಣಿ ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಉಪಾಧ್ಯಕ್ಷ ಪ್ರೀತಿ ಡಿನ್ನ ಪಿರೇರ, ಸದಸ್ಯರಾದ ಮೆಲ್ವಿನ್ ಕಿಶೋರ್ ಮಾರ್ಟೀಸ್, ಪೆರಾಜೆ ಗ್ರಾ.ಪಂ ಅಧ್ಯಕ್ಷೆ ರೋಹಿಣಿ, ಉಪಾಧ್ಯಕ್ಷ ಉಮ್ಮಾರ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಸದಸ್ಯರಾದ ಕುಶಲ ಎಂ.ಪೆರಾಜೆ, ನೀಲಯ್ಯ ಪೂಜಾರಿ, ತಿಮ್ಮಪ್ಪ ಗೌಡ, ಸುಂದರ ಬಂಗೇರ, ಲಿಂಗಪ್ಪ ಕುಲಾಲ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಬುಡೋಳಿ, ಪ್ರಮುಖರಾದ ಅಪ್ರಾಯ ಪೈ ಬುಡೋಳಿ, ಸಾಂತಪ್ಪ ಕುಲಾಲ್ ಏಮಾಜೆ, ಸುಲೈಮಾನ್ ಸೂರಿಕುಮೇರ್, ನಾರಾಯಣ, ಪಿಯುಸ್ ಎಲ್. ರೋಡ್ರಿಗಸ್, ರಾಮಣ್ಣ ಗೌಡ ಪೆರಾಜೆ, ಅಝೀಜ್ ಜೋಗಿಬೆಟ್ಟು, ಉಪಸ್ಥಿತರಿದ್ದರು.