ವಿಟ್ಲ, ಮೇ 10 (DaijiworldNews/SM): ಕನ್ಯಾನ ಗ್ರಾಮದ ನಂದರಬೆಟ್ಟು ಎಂಬಲ್ಲಿ ಅಣ್ಣನೇ ತಮ್ಮನನ್ನು ಕೊಲೆ ಮಾಡಿದ ಘಟನೆ ಸಂಭವಿಸಿದೆ. ನಂದರಬೆಟ್ಟು ಬಾಳಪ್ಪ ನಾಯ್ಕ(35) ಮೃತಪಟ್ಟ ದುರ್ದೈವಿ.
ನಂದರಬೆಟ್ಟು ಐತ್ತಪ್ಪ ನಾಯ್ಕ(40) ನೊಗದಿಂದ ಬಡಿದು ಬಾಳಪ್ಪ ನಾಯ್ಕ ಅವರನ್ನು ಕೊಲೆ ಮಾಡಿದ್ದಾನೆ. ಕಂಠಪೂರ್ತಿ ಕುಡಿದ ಮತ್ತಿನಿಂದ ಅಣ್ಣತಮ್ಮಂದಿರೊಳಗೆ ಜಗಳ ಆರಂಭವಾಗಿ ಕೊಲೆಯಲ್ಲಿ ಪ್ರಕರಣ ಅಂತ್ಯವಾಯಿತೆಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.