ಕಾಸರಗೋಡು, ಮೇ 10 (DaijiworldNews/SM): ಜಿಲ್ಲೆಯಲ್ಲಿ ಆಹಾರ ಸುರಕ್ಷಾ ಇಲಾಖೆ ತಪಾಸಣೆ ಮುಂದುವರಿಯುತ್ತಿದ್ದು, ಹೊರ ರಾಜ್ಯಗಳಿಂದ ಮೀನು ಹೇರಿಕೊಂಡು ಜಿಲ್ಲೆಗಾಗಮಿಸುವ ವಾಹನಗಳನ್ನು ಮಂಜೇಶ್ವರ ಹಾಗೂ ತಲಪಾಡಿಯಲ್ಲಿ ತಪಾಸಣೆ ನಡೆಸಲಾಯಿತು.
25 ವಾಹನಗಳನ್ನು 42 ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಯಿತು. ಮೀನುಗಳನ್ನು ಫಾರ್ಮೋಲಿನ್, ಅಮೋನಿಯ ಮೊದಲಾದ ರಾಸಾಯನಿಕ ಪದಾರ್ಥದ ಅಂಶ ಒಳಗೊಂಡಿದೆಯೇ ಎಂಬ ಬಗ್ಗೆ ತಪಾಸಣೆ ನಡೆಸಲಾಗಿದೆ. ಕರ್ನಾಟಕ , ಗೋವಾ ಹಾಗೂ ಇತರ ರಾಜ್ಯಗಳಿಂದ ಬರುವ ವಾಹನಗಳನ್ನು ತಪಾಸಣೆಗೊಳಪಡಿಸಲಾಯಿತು. ಉಪ್ಪಳದ ಹಲವು ಅಂಗಡಿಗಳಿಗೂ ದಾಳಿ ನಡೆಸಿದ ಇಲಾಖೆ ಅಧಿಕಾರಿಗಳು ಆಹಾರ ವಸ್ತುಗಳ ಗುಣಮಟ್ಟ ಪರಿಶೀಲಿಸಿದರು.
ಶವರ್ಮ ಸೇವಿಸಿ ಚೆರ್ವತ್ತೂರಿ ನಲ್ಲಿ ವಿದ್ಯಾರ್ಥಿನಿ ಮೃತಪಟ್ಟ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಆಹಾರ ಸುರಕ್ಷಾ ಇಲಾಖೆ ತಪಾಸಣೆ ಚುರುಕು ಗೊಳಿಸಿದೆ.