ಹೆಬ್ರಿ, ಮೇ 10 (DaijiworldNews/MS): ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣ ಶೇಕಡ 3 ರಿಂದ 7.5 ಕ್ಕೆ ಹೆಚ್ಚಳ ಮಾಡುವ ಕುರಿತು ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಯು ಇಂದು ಹೆಬ್ರಿ ತಹಸೀಲ್ದಾರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
1958ರಲ್ಲಿ ನಿಗದಿಯಾಗಿದ್ದ ಶೇಕಡ 3ರ ಮೀಸಲಾತಿ ಪ್ರಮಾಣವಾಗಿದ್ದು, 1961 ರ ಜನಗಣತಿಯಲ್ಲಿ ಪರಿಶಿಷ್ಟ ಪಂಗಡದವರ ಜನಸಂಖ್ಯೆ 1,92,096ರಷ್ಟಿದ್ದು, ಮುಂದಿನ 5 ಜನಗಣತಿಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿ 2011ರಲ್ಲಿ 42,48,987 ಆಗಿರುತ್ತದೆ. ಪರಿಶಿಷ್ಟ ಪಂಗಡದವರ ಜನಸಂಖ್ಯೆ 1961 ರ ಜನಗಣತಿಗೆ ಹೋಲಿಸಿದಲ್ಲಿ 22.11 ರಷ್ಟು ಹೆಚ್ಚಾಗಿರುತ್ತದೆ. ಆದರೆ ಮೀಸಲಾತಿ ಪ್ರಮಾಣ ಶೇಕಡ 3 ರಷ್ಟೆ ಇದೆ. ಪರಿಶಿಷ್ಟ ಪಂಗಡದವರಿಗೆ ಪ್ರಾತಿನಿಧ್ಯ ಸಂಬಂಧಪಟ್ಟಂತೆ ಅನೇಕ ವರ್ಷಗಳಿಂದ ದೊಡ್ಡ ಅನ್ಯಾಯವಾಗಿರುತ್ತದೆ. ಆದ್ದರಿಂದ ಮೀಸಲಾತಿ ಪ್ರಮಾಣವನ್ನೇ ಜನಸಂಖ್ಯೆಗನುಗುಣವಾಗಿ ಶೇಕಡ 7.5ಕ್ಕೆ ಹೆಚ್ಚಿಸಬೇಕೆಂದು ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಯು ಸರ್ಕಾರವನ್ನು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಕ್ರಿಯಾ ಸಮಿತಿಯ ಸದಸ್ಯರಾದ ಗಂಗಾಧರ ಗೌಡ, ನಾಗೇಂದ್ರ ನಾಯ್ಕ, ಸುರೇಶ ನಾಯ್ಕ, ರಾಘವ ನಾಯ್ಕ, ಕೆ ಪುತ್ರನ್, ಪ್ರಕಾಶ ಗೌಡ, ಶ್ರೀಮತಿ ಗೀತಾ ಗೌಡ, ಶೇಖರ ಗೌಡ, ದಿವಾಕರ, ಚಂದ್ರ, ಬೋಗ್ರ ಉಪಸ್ಥಿತಿದ್ದರು