ಉಡುಪಿ, ಮೇ 10 (DaijiworldNews/MS): ಉನ್ನತ ವ್ಯಾಸಂಗ ನಡೆಸಿದ್ದರೂ, ವಿದ್ಯಾರ್ಹತೆಗೆ ತಕ್ಕ ಕೆಲಸ ಸಿಗದ ಕಾರಣ ಮನನೊಂದ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.
ಸಹನಾ (23) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮಂಗಳೂರಿನ ಕಾಲೇಜಿನಲ್ಲಿ ಒಂದೂವರೆ ವರ್ಷದ ಹಿಂದೆ ಎಂಬಿಎ ಮುಗಿಸಿದ್ದಳು. ಆದರೆ, ಆಕೆಗೆ ಸೂಕ್ತ ಕೆಲಸ ಸಿಕ್ಕಿರಲಿಲ್ಲ. ಏಪ್ರಿಲ್ 30 ರಂದು ಶಿರ್ವ ಸಮೀಪದ ಕಟ್ಟಿಂಗೇರಿ ಗ್ರಾಮದ ಎಡಮೇರುವಿನ ಅಕ್ಕ ಸೌಮ್ಯ ಅವರ ಮನೆಗೆ ಬಂದಿದ್ದು ಅಲ್ಲೇ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ .
ಮೇ 1ರ ಬೆಳಗ್ಗೆ ಸಹನಾ ವಾಂತಿ ಮಾಡಿದ್ದು ಹೀಗಾಗಿ ಆಕೆಯನ್ನು ಉಡುಪಿಯ ಮಿಷನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಆಕೆಯ ಸ್ಥಿತಿ ಚಿಂತಾಜನಕ ಹಂತಕ್ಕೆ ತಲುಪಿದ್ದರಿಂದ ಮೇ 7 ರಂದು ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಹನಾ ಅವರನ್ನು ಸ್ಥಳಾಂತರಿಸಲಾಯಿತು. ಮೇ 9 ರಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.