ಪುತ್ತೂರು, ಮೇ 10 (DaijiworldNews/HR): ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ನೌಫಲ್ ಸರಳಿಕಟ್ಟೆ ಎಂದು ಗುರುತಿಸಲಾಗಿದೆ.
ನೌಫಲ್ ಬಸ್ ನಿಲ್ದಾಣದಲ್ಲಿ ಮನೆಗೆಲಸ ಮಾಡುವ ಗದಗ ಮೂಲದ ಮಹಿಳೆಯೊಬ್ಬರ ಮಗಳಿಗೆ ಆಮಿಷ ಒಡ್ಡಿ ಬಸ್ ನಿಲ್ದಾಣದ ವಾಶ್ರೂಮ್ಗೆ ಕರೆದೊಯ್ದಿದ್ದಾನೆ ಎಂದು ಆರೋಪಿಸಲಾಗಿದೆ.
ಇನ್ನು ಈ ವಿಷಯ ಮಹಿಳೆಗೆ ತಿಳಿದು ಆರೋಪಿಯನ್ನು ವಿಚಾರಿಸಿದ್ದಾಳೆ. ಈ ವೇಳೆ ನೌಫಲ್ ಮಹಿಳೆಗೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದ್ದು, ಆಕೆ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದಾಳೆ.
ಇದೇ ವೇಳೆ ಹಿಂದೂಪರ ಸಂಘಟನೆಗಳ ಮುಖಂಡರು ಕೂಡ ಸ್ಥಳದಲ್ಲಿ ಜಮಾಯಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.