ಮಂಗಳೂರು, ಮೇ 10 (DaijiworldNews/MS): ಮಂಗಳೂರು ಮೂಲದ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಮಹಿಳೆಯೊಬ್ಬರು ಮೇ.21 ರಂದು ನಡೆಯುವ ಆಸ್ಟ್ರೇಲಿಯಾ ಸಂಸತ್ (ಫೆಡರಲ್ ) ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಆಸ್ಟ್ರೇಲಿಯಾದ ಮೆಲ್ಬರ್ಬ್ ನಲ್ಲಿ ನೆಲೆಸಿರುವ ಅಲ್ಲಿನ ಕೊಂಕಣ ಸಮುದಾಯದ ಬೆಂಬಲಿಗರು ಆಗಿರುವ ಮೀರಾ ಡಿ’ಸಿಲ್ವ ರಾಜಕೀಯಕ್ಕೆ ಧುಮುಕಿರುವ ಮೊದಲ ಮಂಗಳೂರಿನ ಕ್ಯಾಥೋಲಿಕ್ ಮಹಿಳೆಯಾಗಿದ್ದಾರೆ.
ಮೀರಾ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದರೂ, ಅವರ ಪೋಷಕರು ಮಂಗಳೂರಿನ ಕುಲಶೇಖರ ಮೂಲದವರಾಗಿದ್ದಾರೆ. 2004 ರಲ್ಲಿ ಆಸ್ಟ್ರೇಲಿಯಾಕ್ಕೆ ವಲಸೆ ಬಂದರು. ಯಶಸ್ವಿ ವಾಣಿಜ್ಯೋದ್ಯಮಿ, ಅವರು ಏಷ್ಯಾ-ಪೆಸಿಫಿಕ್ (APAC) ಪ್ರದೇಶದಾದ್ಯಂತ ಕಚೇರಿಗಳನ್ನು ಹೊಂದಿರುವ ವಿಶೇಷ ತಂತ್ರಜ್ಞಾನ ಸೇವಾ ಪೂರೈಕೆದಾರರಾದ ಡೆಲಿವರಿ ಸೆಂಟ್ರಿಕ್ನ ಸಹ-ಸಂಸ್ಥಾಪಕರಾಗಿದ್ದಾರೆ.
ಅಲ್ಲಿನ ಮೇರಿಬಿರ್ನಾಂಗ್ ಸೀಟ್ ನಿಂದ ಆಡಳಿತರೂಢ ಲೇಬರ್ ಪಾರ್ಟಿಯಿಂದ ಸ್ಪರ್ಧಿಸುತ್ತಿದ್ದಾರೆ. ಮೇ 21 ರಂದು ಚುನಾವಣೆ ನಡೆಯಲಿದೆ.