ಕಾಸರಗೋಡು, ಮೇ 10 (DaijiworldNews/MS): ಶವರ್ಮ ಸೇವಿಸಿ ವಿದ್ಯಾರ್ಥಿನಿ ಮೃತಪಟ್ಟ ಘಟನೆಗೆ ಸಂಬಂಧ ಪಟ್ಟಂತೆ ಚೆರ್ವತ್ತೂರಿನ ಕೂಲ್ ಬಾರ್ ಮಾಲಕ ಕುಞಮ್ಮದ್ ವಿರುದ್ದ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ. ಕುಞಮ್ಮದ್ ವಿದೇಶ ದಲ್ಲಿದ್ದಾರೆ ಎನ್ನಲಾಗಿದೆ.
ಕೂಲ್ ಬಾರ್ ನ ಪಾಲುದಾರ, ಮೆನೇಜರ್ ಸೇರಿದಂತೆ ಮೂವರನ್ನು ಈಗಾಗಲೇ ಬಂಧಿಸಲಾಗಿದೆ. ಮೇ ಒಂದರಂದು ಘಟನೆ ನಡೆದಿತ್ತು. ಕೂಲ್ ಬಾರ್ ನಿಂದ ಶವರ್ಮ ಸೇವಿಸಿದ ದೇವಾನಂದ ಎಂಬ ವಿದ್ಯಾರ್ಥಿನಿ ಮೃತ ಪಟ್ಟಿದ್ದು, 56 ಮಂದಿ ಅಸ್ವಸ್ಥಗೊಂಡಿದ್ದರು. ಏಪ್ರಿಲ್ 29 ಮತ್ತು 30 ರಂದು ಶವರ್ಮ ಸೇವಿಸಿ್ದ್ದವರಿಗೆ ಅಸ್ವಸ್ಥತೆ ಕಂಡು ಬಂದಿತ್ತು. ಈ ಪೈಕಿ ಓರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದಳು.