ವಿಟ್ಲ, ಮೇ 09 (DaijiworldNews/SM): ಕನ್ಯಾನ ಗ್ರಾಮದಲ್ಲಿ ಆತ್ಮಹತ್ಯೆಗೈದ ಅಪ್ರಾಪ್ತ ಬಾಲಕಿ ಮನೆಗೆ ವಜ್ರ ದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಭೇಟಿ ನೀಡಿ, ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು.
ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು ಬಂಧನವಾದ ವ್ಯಕ್ತಿಯ ತಾಯಿಯಿಂದ ಕುಟುಂಬಕ್ಕೆ ಒಂದು ರೀತಿಯ ತೊಂದರೆ ಬಂದಿದೆ. ಆರಕ್ಷಕರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬೇಧಿಸಬೇಕು. ಆತ್ಮಹತ್ಯೆ ಎಂಬಲ್ಲಿಗೆ ಮುಗಿದು ಹೋಗದೆ ಪ್ರಕರಣವನ್ನು ಸಿಐಡಿಗೆ ನೀಡಿ ಆರೋಪಿಗೆ ಕಠಿಣ ಶಿಕ್ಷೆ ಕೊಡಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಕಣಿಯೂರು ಬಾಲಕಿ ಆತ್ಮಹತ್ಯೆ ಪ್ರಸರಣ ಓರ್ವ ನಿಂದ ಮಾತ್ರ ನಡೆಯಲು ಸಾಧ್ಯವಿಲ್ಲ. ಆರೋಪಿಯ ಹಿಂದೆ ಬೇರೆ ಯಾರೋ ಇದ್ದಾರೆ ಎಂಬ ಗುಮಾನಿ ಬರುತ್ತಿದೆ. ಬಾಲಕಿಯನ್ನು ಬುರ್ಕಾ ಹಾಕಿ ಕರೆದುಕೊಂಡು ಹೋಗುತ್ತಿದ್ದ ಕಾರಣ ಲವ್ ಜಿಹಾದ್ ನ ಸಂಚು ಕೂಡಾ ಕಾಣಿಸುತ್ತಿದೆ. ಲವ್ ಜಿಹಾದ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕಾನೂನು ಜಾರಿಗೆ ತರಬೇಕು. ಬಾಲಕಿಯ ಮನೆ ಪರಿಸ್ಥಿತಿಯನ್ನು ಗಮನಿಸಿದಾಗ ೧೦ಲಕ್ಷಕ್ಕಿಂತ ಆಧಿಕ ಪರಿಹಾರವನ್ನುಒದಗಿಸುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಹಿಂದೂ ಜಾಗರಣ ವೇದಿಕೆ ಮುಖಂಡರಾದ ಉಲ್ಲಾಸ್ ಕೆ. ಟಿ., ಪ್ರಶಾಂತ್ ಬಂದ್ಯೋಡು, ಚಿನ್ಮಯಿ, ರತ್ನಾಕರ ಶೆಟ್ಟಿ, ನರಸಿಂಹ ಮಾಣಿ, ಅಜಿತ್ ಹೊಸಮನೆ, ಪ್ರಶಾಂತ್ ಬಂಟ್ವಾಳ, ರಮೇಶ್, ರಾಜೇಶ್ ನಾಯಕ್, ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು, ಅಶ್ವಥ ಶೆಟ್ಟಿ ಪಟ್ಲ ಮತ್ತಿತರರು ಉಪಸ್ಥಿತರಿದ್ದರು.