ಉಡುಪಿ, ಮೇ 09 (DaijiworldNews/MS):ಚಂಡಮಾರುತದ ಪ್ರಭಾವದಿಂದ ಸಮುದ್ರ ಪ್ರಕ್ಷುಬ್ದಗೊಂಡಿದ್ದು,ಮುಂದಿನ ಆದೇಶದವರೆಗೆ ಮಲ್ಪೆಯಲ್ಲಿ ಎಲ್ಲಾ ರೀತಿಯ ವಾಟರ್ ಸ್ಪೋರ್ಟ್ಸ್ ಸ್ಥಗಿತಗೊಳಿಸಿ ಜಿಲ್ಲಾಡಳಿತ ಆದೇಶ ನೀಡಿದೆ.
ಅರಬ್ಬೀ ಸಮುದ್ರದಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಅರಬ್ಬೀ ಸಮುದ್ರದಲ್ಲಿ ತೀವ್ರ ತರದ ಗಾಳಿ ಬೀಸುತ್ತಿದ್ದು, ಈ ಹಿನ್ನಲೆಯಲ್ಲಿಜಲಕ್ರಿಡೆ, ಬೋಟ್ ಚಟುವಟಿಕೆ, ಫ್ಲೋಟಿಂಗ್ ಬ್ರಿಡ್ಜ್, ಸೈಂಟ್ ಮೇರಿಸ್ ದ್ವೀಪ ಪ್ರಯಾಣಕ್ಕೆ ಮುಂದಿನ ಆದೇಶದವರೆಗೆ ನಿರ್ಭಂದ ಹೇರಲಾಗಿದೆ.
ರಜೆಯ ಮಜಾ ಅನುಭವಿಸಲು ದೂರದ ಪ್ರದೇಶಗಳಿಂದ ಮಲ್ಪೆ ಗೆ ಆಗಮಿಸುತ್ತಿರುವ ಪ್ರವಾಸಿಗರಿಗೆ ಇದರಿಂದ ನಿರಾಸೆಯಾದರೂ ಜಿಲ್ಲಾಡಳಿತವು ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದೆ.ಇದಲ್ಲದೆ ಪ್ರವಾಸಿಗರಿಗೆ ಧ್ವನಿವರ್ದಕದ ಮೂಲಕ ನೀರಿಗೆ ಇಳಿಯದಂತೆ ಎಚ್ಚರಿಕೆನೀಡಲಾಗುತ್ತಿದ್ದು , ಎಲ್ಲಾ ಪ್ರವಾಸಿ ಬೋಟ್ ಗಳ ಸಂಚಾರ ಸ್ಥಗಿತಗೊಂಡಿದೆ.