ಉಡುಪಿ, ಮೇ 09 (DaijiworldNews/HR): ಪ್ರಮೋದ್ ಮಧ್ವರಾಜ್ ಪಕ್ಷ ತೊರೆದಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವ ಹಾನಿಯಾಗುವುದಿಲ್ಲ. ಇದರಿಂದ ಹೊಸ ಯುವಕರಿಗೆ, ಬೇರೆ ಸಮರ್ಥ ನಾಯಕರಿಗೆ ಅವಕಾಶ ಕೊಟ್ಟಂತಾಗಿದೆ. ಪಕ್ಷದಲ್ಲಿ ನಾಯಕತ್ವ ಇಲ್ಲ ಎಂದು ಕಾರ್ಯಕರ್ತರು ಕಳವಳ ಪಟ್ಟು ಕೊಳ್ಳುವುದು ಬೇಡ, ಎಂದು ಕಾಂಗ್ರೆಸ್ ನಾಯಕ ಪ್ರಸಾದ್ ರಾಜ್ ಕಾಂಚನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸೋಮವಾರ ಉಡುಪಿ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ನಲ್ಲಿ ನಾಯಕತ್ವ ಇನ್ನೂ ಇದೆ. ಸಮರ್ಥ ನಾಯಕ ಜಿಲ್ಲಾ ಅಧ್ಯಕ್ಷ ರಾಗಿದ್ದಾರೆ. ಪ್ರಮೋದ 2018ರ ಚುನಾವಣೆ ನಂತರ ಸಚಿವರು ಪ್ರಸಿದ್ದಿ ಕಳೆದುಕೊಂಡಿದ್ದರು. ಒಂದು ವರ್ಷದ ಮೊದಲೇ ಕಾರ್ಯಕರ್ತರೊಂದಿಗೆ ಸಂಪರ್ಕ ಕಳೆದುಕೊಂಡಿದ್ದರು. ಪಕ್ಷದಲ್ಲಿ ಅವಕಾಶ ಕೊಡುವ ಬಗ್ಗೆ ಬೇರೆಬೇರೆ ಮಾತುಕತೆ ನಡೆಯುತ್ತಿದೆ. ಹಿಂದುಳಿದವರಿಗೆ, ಮಹಿಳೆಯರಿಗೆ ಸೀಟು ಕೊಡುವ ಬಗ್ಗೆ ಕೂಡ ಚಿಂತನೆ ನಡೆಸಲಾಗುತ್ತಿದೆ ಎಂದರು.
ಇನ್ನು ನನಗೆ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಅವಕಾಶಕ್ಕೆ ಎಲ್ಲೂ ಕೇಳಿಲ್ಲ. ನಾನು ರಾಜಕೀಯ ಕುಟುಂಬದಿಂದ ಬಂದವನು. ಕಾಂಗ್ರೆಸ್ ಕಾರ್ಯಕರ್ತರು ಅಪೇಕ್ಷೆ ಪಟ್ಟರೆ ಚುನಾವಣೆಗೆ ನಿಲ್ಲಲು ನಿರ್ಧರಿಸಬಹುದು. ಪ್ರಮೋದ್ ಪಕ್ಷಾಂತರ ನಿರ್ಧಾರದಿಂದ ಕಳವಳ ಪಟ್ಟು ಗ್ರಾಮೀಣ ಕಾರ್ಯಕರ್ತರು ಯಾವುದೇ ಅವಸರದ ನಿರ್ಧಾರ ತೆಗೆದುಕೊಳ್ಳಬಾರದು. ಅವರ ವೈಯಕ್ತಿಕ ನಿರ್ಧಾರದಿಂದ ರಾಜಕೀಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.
ಈ ವೇಳೆ ಮೈರ್ಮಾಡಿ ಸುಧಾಕರ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, ಸಂಜೀವ ಸಾಲಿಯಾನ್ ಮತ್ತು ಪ್ರದೀಪ್ ಪೂಜಾರಿ ಉಪಸ್ಥಿತರಿದ್ದರು.