ಮಲ್ಪೆ, ಮೇ 09 (DaijiworldNews/MS): ಮಲ್ಪೆ ಕಡಲತೀರದಲ್ಲಿ ರಾಜ್ಯದ ಏಕೈಕ ತೇಲುವ ಸೇತುವೆ ಸಮುದ್ರ ಪಾಲಾದ ಬಗ್ಗೆ ವರದಿಗಳನ್ನು ತಳ್ಳಿಹಾಕಿದ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್ ಶೆಟ್ಟಿ ,"ಏಕಾಏಕಿ ಸಮುದ್ರದ ಅಬ್ಬರ ಕಾಣಿಸಿಕೊಂಡ ಕಾರಣ ಸೇತುವೆಯನ್ನು ಕಳಚಲು ಸಾಧ್ಯವಾಗಲಿಲ್ಲ. ಸೇತುವೆಯ ಹಾನಿ ತಪ್ಪಿಸಲು ಸಂಪರ್ಕ ಕಡಿತಗೊಳಿಸಲಾಗಿದೆ" ಎಂದು ಸ್ಪಷ್ಟನೆ ನೀಡಿದ್ಡಾರೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, "ಸೈಕ್ಲೋನ್ ಎಫೆಕ್ಟ್ ಮತ್ತು ಭಾರೀ ಗಾಳಿಯಿಂದಾಗಿ, ತೇಲುವ ಸೇತುವೆಗೆ ಯಾವುದೇ ಹಾನಿಯಾಗದಂತೆ ನಾವು ಸೇತುವೆಯ ಲಾಕ್ ಗಳನ್ನು ಕಡಿತಗೊಳಿಸಿದ್ದೇವೆ. ಇದರಿಂದಾಗಿ ಇಂದು ಬೆಳಗ್ಗೆ ಸೇತುವೆಯ ಕೆಲವು ಬ್ಲಾಕ್ಗಳು ಸಮುದ್ರದಲ್ಲಿ ತೇಲುತ್ತಿದ್ದವು.
ಸಾವು-ನೋವು ಸಂಭವಿಸಿದೆ ಎಂದು ವಂದತಿ ಹಬ್ಬಿದ್ದು, ಯಾವುದೇ ಪ್ರಾಣಹಾನಿ ಅಥವಾ ಯಾರಿಗೂ ಹಾನಿಯಾಗಿಲ್ಲ ಎಂದು ನಾವು ಬಲವಾಗಿ ದೃಢೀಕರಿಸುತ್ತೇವೆ. ಪ್ರಸ್ತುತ, ಯಾವುದೇ ಜಲಕ್ರೀಡೆ ಚಟುವಟಿಕೆಗಳ ಬಗ್ಗೆ ಆಡಳಿತದ ಸೂಚನೆಯಿಂದಾಗಿ ತೇಲುವ ಸೇತುವೆಯನ್ನು ಮುಚ್ಚಲಾಗಿದೆ. ತೇಲುವ ಸೇತುವೆ ಮತ್ತೆ ಸುರಕ್ಷಿತವಾಗಿ ಕಾರ್ಯಾರಂಭ ಮಾಡಲಿದೆ" ಎಂದು ಹೇಳಿದ್ದಾರೆ.
ಹಿಂದಿನ ವರದಿ:
ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಅಳವಡಿಸಲಾಗಿದ್ದ ತೇಲುವ ಸೇತುವೆ(ಫ್ಲೋಟಿಂಗ್ ಬ್ರಿಡ್ಜ್) ಉದ್ಘಾಟನೆಯಾದ ಮೂರೇ ದಿನಕ್ಕೆ ಸಮುದ್ರ ಪಾಲಾಗಿದೆ.
ಮಲ್ಪೆ ಬೀಚ್ನಲ್ಲಿ ಪ್ರವಾಸಿಗರ ಆಕರ್ಷಣೆಗೆಂದು , ತೊಯ್ದಾಡುವ ಅಲೆಗಳ ಮಧ್ಯೆ ತೇಲುತ್ತಾ, ಪ್ರವಾಸಿಗರಿಗೆ ವಿಶೇಷ ಅನುಭವ ಸುಮಾರು 80 ಲಕ್ಷ ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗಿದ್ದು.ಆದರೆ ಉದ್ಘಾಟನೆಯಾದ ಮೂರೇ ದಿನಕ್ಕೆ ಬ್ರಿಡ್ಜ್ ಭಾಗ ಚದುರಿ ಹೋಗಿ ಸಮುದ್ರಪಾಲಾಗಿದೆ.
ಭಾನುವಾರ ಬೆಳಗ್ಗೆಯಿಂದಲೇ ಕಡಲು ಪ್ರಕ್ಷುಬ್ಧವಾಗಿದ್ದು, ನೂತನ ಅಲೆಗಳಲ್ಲಿ ತೇಲುವ ಸೇತುವೆಯನ್ನು ನೋಡಲು , ಅನುಭವಿಸಲು ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿದ್ದರೂ ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಜನರ ಸುರಕ್ಷತೆ ದೃಷ್ಟಿಯಿಂದ ಸೇತುವೆ ಮೇಲೆ ನಡೆದಾಡಲು ಅವಕಾಶ ನೀಡಿರಲಿಲ್ಲ.
ಸುಮಾರು 100 ಮೀ. ಉದ್ದ, 3.50 ಮೀ. ಅಗಲವಿದ್ದಈ ಸೇತುವೆಯನ್ನು ಹೆಚ್ಚಿನ ಸಾಂದ್ರತೆಯ ಫೋಂಟೋನ್ಸ್ ಬ್ಲಾಕ್ ಗಳಿಂದ ಇದನ್ನು ಮಾಡಲಾಗಿತ್ತು. ಆದರೆ ಅಲೆಗಳ ಭೀಕರ ಹೊಡೆತಕ್ಕೆ ಸಿಲುಕಿ ತೀವ್ರವಾಗಿ ಹಾನಿಯಾಗಿದ್ದು, ಸೇತುವೆ ಬಿಡಿಭಾಗಗಳು ಸಮುದ್ರ ಪಾಲಾಗಿದೆ.ಕೇರಳದ ಬೇಪೋರ್ ಬೀಚ್ ಹೊರತುಪಡಿಸಿದರೆ ದೇಶದ ಬೇರೆಲ್ಲೂ ಈ ರೀತಿಯ ತೇಲುವ ಸೇತುವೆ ಇರಲಿಲ್ಲ.