ಕಾಸರಗೋಡು, ಮೇ 08 (DaijiworldNews/SM): ಶವರ್ಮ ಸೇವಿಸಿ ವಿದ್ಯಾರ್ಥಿನಿ ಬಳಿಕ ಆರೋಗ್ಯ ಇಲಾಖೆ ತಪಾಸಣೆಗೆ ಮುಂದಾಗಿದ್ದು, ಕಾಸರಗೋಡು ನಗರದ ಶವರ್ಮ ಹೋಟೆಲ್ ಗೆ ಬೀಗ ಜಡಿದಿದೆ.
30ಕ್ಕೂ ಅಧಿಕ ಹೋಟೆಲ್ ಗಳಿಗೆ ಮುನ್ನೆಚ್ಚರಿಕಾ ನೋಟಿಸ್ ನೀಡಿದೆ. ಹಲವು ಹೋಟೆಲ್ ಗಳಿಂದ ಹಳಸಿದ ಆಹಾರ ಪದಾರ್ಥಗಳನ್ನು ಪತ್ತೆ ಹಚ್ಚಿದ್ದಾರೆ. ಕೆಲ ಹೋಟೆಲ್ ಗಳ ಫ್ರಿಡ್ಜ್ ನಲ್ಲಿರಿಸಲಾಗಿದ್ದ ಹಳಸಿದ ಮೀನು, ಮಾಂಸವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದು, ಈ ಹೋಟೆಲ್ ಗಳಿಗೆ ಮುನ್ನೆಚ್ಚರಿಕೆ ನೀಡಿ ನೋಟಿಸ್ ನೀಡಿದ್ದಾರೆ.
ನೈರ್ಮಲ್ಯ ಇಲ್ಲದ ನೂರಕ್ಕೂ ಅಧಿಕ ಹೋಟೆಲ್ ಗಳು ತಪಾಸಣೆ ವೇಳೆ ಪತ್ತೆ ಹಚ್ಚಲಾಗಿದ್ದು, ಈ ಹೋಟೆಲ್ ಮಾಲಕರಿಗೂ ನೋಟಿಸ್ ನೀಡಲಾಗಿದೆ.