ಬಂಟ್ವಾಳ, ಮೇ 07 (DaijiworldNews/HR): ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಾರಕ್ಕೊಂದು ದಿನ ನೈತಿಕ ಶಿಕ್ಷಣವನ್ನು ಜಾರಿಗೊಳಿಸುವ ಚಿಂತನೆ ಇದೆ ಎಂದು ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಡಿಜಿಟಲ್ ಲೈಬ್ರರಿ, ಶಾಲಾ ವೆಬ್ ಸೈಟನ್ನು ಉದ್ಟಾಟಿಸಿ ಮಾತನಾಡಿದ ಅವರು, ಮಕ್ಕಳ ವಿಕಸನಕ್ಕಾಗಿ ನರೇಂದ್ರಮೋದಿಯವರ ಪ್ರಯತ್ನದ ಫಲವಾಗಿ ಏಕರೂಪ ಭಾರತೀಯ ಶಿಕ್ಷಣ ನೀತಿಯನ್ನು ದೇಶದ 20 ಸಾವಿರ 1 ಮತ್ತು2 ನೇ ತರಗತಿಗಳಲ್ಲಿ ಜಾರಿಗೊಳಿಸಲಾಗುವುದು ಎಂದ ಶಿಕ್ಷಣ ಸಚಿವ ನಾಗೇಶ್ ಅವರು, ಭಾರತೀಯ ಶಿಕ್ಷಣ ಪದ್ದತಿ ಭಾರತವನ್ನು ಸ್ವಾವಲಂಬಿಯನ್ನಾಗಿಸಿದ್ದು, ಚಾರಿತ್ರ್ಯ ನಿರ್ಮಾಣಕ್ಕೆ ಶಿಕ್ಷಣ ಮುಖ್ಯವಾಗಿದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹಳ್ಳಿಯ ಪರಿಸರದಲ್ಲಿ ಕಲಿತ ಮಕ್ಕಳು ಶ್ರೀಮಂತರು ಪುಣ್ಯವಂತರು. ಬಂಟ್ವಾಳ ಕ್ಷೇತ್ರದಲ್ಲಿರುವ ಶಿಕ್ಷಕ, ಶಿಕ್ಷಕಿಯರ ಕೊರತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದರು.
ಭಾರತ ಸಂವಿಧಾನ ವಿಚಾರವಾಗಿ ಕುಡುಚಿ ಶಾಸಕ ಪಿ. ರಾಜೀವ್ ದಿಕ್ಸೂಚಿ ಭಾಷಣಗೈದು, ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಶಾಲೆ ನಮ್ಮೆಲ್ಲರ ಕಣ್ಣು ತೆರೆಸಿದೆ.ಸರಕಾರಿ ಶಾಲೆಗಳ ಅಭಿವೃದ್ಧಿ ಗಾಗಿ ತಾನು ರಾಜಕಾರಣದಲ್ಲಿರುವವರೆಗೆ ತನ್ನ ವೇತನದ ಆರ್ಧ ಭಾಗವನ್ನು ಮೀಸಲಿಡುವುದಾಗಿ ಭರವಸೆಯಿತ್ತರು.
ಅಭಿವೃದ್ಧಿ ಪರ,ಕ್ರಿಯಾಶೀಲ ಶಾಸಕರನ್ನು ಬಂಟ್ವಾಳ ಜನತೆ ಪಡೆದುಕೊಂಡಿದ್ದು, ಕ್ರಿಯಾತ್ಮಕ ಯೋಚನೆಯ ಮೂಲಕ ಕ್ಷೇತ್ರದ ಅಭಿವೃದ್ಧಿ ಗಾಗಿ ಅವರ ಶ್ರಮ ಅದ್ಬುತವಾಗಿದೆ ಎಂದು ಹೇಳಿದರು.
ಅತಿಥಿಯಾಗಿದ್ದ ವಿಧಾನ ಪರಿಷತ್ತಿನ ಸದಸ್ಯರಾದ ಎಸ್.ಎಲ್.ಭೋಜೆಗೌಡಮಾತನಾಡಿ,ಜನಪ್ರತಿನಿಧಿಗಳ,ಸರಕಾರಿ ಅಧಿಕಾರಿಗಳ, ಉದ್ಯಮಿಗಳ ಸಹಿತ ಗಣ್ಯರ ಮಕ್ಕಳು,ಮೊಮ್ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ಶಿಕ್ಷಣ ಕಲಿಸಬೇಕು ಎಂದರು.
ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ., ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಚ ಸಂಜೀವ ಪೂಜಾರಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದೇವದಾಸ ಶೆಟ್ಟಿ,ಕೆಯುಡಬ್ಲ್ಯು ಎಸ್ ನ ನಿರ್ದೇಶಕಿ ಸುಲೋಚನಾ ಭಟ್ ಜಿ.ಕೆ., ಎಂಆರ್ ಪಿ ಎಲ್ ನ ಮೆನೇಜರ್ ಸಂಪತ್ ರೈ,ಮಾಜಿ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಜಗನ್ನಾಥ ಬಂಗೇರ ನಿರ್ಮಲ್, ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್, ದ.ಕ.ಜಿಲ್ಲಾ ಬಿಜೆಪಿ ಯುವಮೋರ್ಛಾ ಕಾರ್ಯದರ್ಶಿ ಸುದರ್ಶನ್ ಬಜ,ಉದ್ಯಮಿ ರಘು ಸಪಲ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಙಾನೇಶ್ ಮೊದಲಾದವರು ವೇದಿಕೆಯಲ್ಲಿದ್ದರು. ಇದೇವೇಳೆ ದಡ್ಡಲಕಾಡು ಸ್ಥಾಪಕ ಶಿಕ್ಷಕ ಸಂಜೀವ ಗೌಡ,ಪಂಜಿಕಲ್ಲು ಗ್ರಾಪಂ ಪಿಡಿಒ ವಿದ್ಯಾ ಅವರನ್ನು ಗೌರವಿಸಲಾಯಿತು.