ಕಾಸರಗೋಡು, ಮೇ 07 (DaijiworldNews/HR): ನಗರದ ಮಾರುಕಟ್ಟೆಯಿಂದ ಎರಡು ಕ್ವಿಂಟಾಲ್ ಹಳಸಿದ ಮೀನುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಆಹಾರ ಸುರಕ್ಷಾ ಇಲಾಖೆ , ಆರೋಗ್ಯ ಇಲಾಖೆ ಹಾಗೂ ಕಾಸರಗೋಡು ನಗರಸಭೆಯ ಅಧಿಕಾರಿಗಳು ಶನಿವಾರ ಬೆಳಿಗ್ಗೆ ಮಾರುಕಟ್ಟೆಗೆ ತೆರಳಿ ತಪಾಸಣೆ ನಡೆಸಿದ್ದು, ಭಾರೀ ಪ್ರಮಾಣದ ಕೊಳೆತ ಮೀನುಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನಿಂದ ಈ ಮೀನನ್ನು ಕಾಸರಗೋಡು ಮಾರುಕಟ್ಟೆಗೆ ತಲಪಿಸಲಾಗಿತ್ತು. 50ಬಾಕ್ಸ್ ಮೀನುಗಳಲ್ಲಿ 8 ಬಾಕ್ಸ್ ಮೀನು ಕೊಳೆತಿರುವುದು ಕಂಡುಬಂದಿದೆ. ಈ ಮೀನನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದು ಮಾತ್ರವಲ್ಲ ಈ ಮೀನಿಗೆ ಮಾರಕ ರಾಸಾಯನಿಕ ಪದಾರ್ಥ ಬೆರೆಸಿರುವುದು ಪತ್ತೆಯಾಗಿದೆ.
ಇನ್ನು ರಾಸಾಯನಿಕ ಬೆರಕೆಯ ಮೀನುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದು, ಮುಂದಿನ ದಿನಗಳಲ್ಲೂ ಈ ಬಗ್ಗೆ ನಿಗಾ ಇರಿಸಲಾಗುವುದು. ತಪಾಸಣೆ ನಡೆಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.