ಉಡುಪಿ, ಮೇ 07 (DaijiworldNews/MS): ಕಾಂಕ್ರೀಟ್ ರಸ್ತೆ ಕುಸಿದ ಕಾರಣ ಮಣ್ಣು ಹೇರಿಕೊಂಡು ಬರುತ್ತಿದ್ದ ಲಾರಿಯೊಂದು ನದಿಗೆ ಉರುಳಿಬಿದ್ದ ಘಟನೆ ಉಡುಪಿಯ ಕಿದಿಯೂರು ಸಂಕೇಶದಲ್ಲಿ ಮೇ 07ರ ಮುಂಜಾನೆ ನಡೆದಿದೆ.
ರಸ್ತೆ ಕಾಮಗಾರಿ ಕಳಪೆಯಾಗಿದ್ದು ಮಣ್ಣು ತುಂಬಿಕೊಂಡು ಬರುತ್ತಿದ್ದ ಲಾರಿಯ ಭಾರಕ್ಕೆ ಕಾಂಕ್ರೀಟ್ ರಸ್ತೆ ಬಾಯಿಬಿಟ್ಟದೆ. ಕಾಂಕ್ರೀಟ್ ಅಡಿಭಾಗದಲ್ಲಿ ಸರಿಯಾಗಿ ಮಣ್ಣು ತುಂಬದ ಪರಿಣಾಮ ಲಾರಿ ಹಾದುಹೋಗುತ್ತಿದ್ದಂತೆಯೇ ಕಾಂಕ್ರಿಟ್ ರಸ್ತೆ ಕುಸಿದು ಏಕಾಏಕಿ ಪಕ್ಕದ ನದಿಗೆ ಉರುಳಿ ಬಿದ್ದಿದೆ.
ಘಟನೆಯಲ್ಲಿ ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದು, ರಸ್ತೆ ಕಳಪೆ ಕಾಮಗಾರಿಯ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.