ಉಡುಪಿ, ಮೇ 06 (DaijiworldNews/SM): ಮಸೀದಿಯ ಎದುರು ಹೋಗಿ ಭಜನೆ ಮಾಡಿದರೆ ಸಂಘರ್ಷ ಆಗಬಹುದು. ಆಜಾನ್ ಕುರಿತಾಗಿ ಸರಕಾರ ಮತ್ತು ಸುಪ್ರೀಂ ಕೋರ್ಟ್ ಆದೇಶ ಪಾಲನೆಯಾಗಬೇಕು. ಉಡುಪಿಯಲ್ಲಿ ಆಜಾನ್ ಶಬ್ದ ಕಡಿಮೆಯಾಗಿದೆ. ಎಲ್ಲಾ ಧಾರ್ಮಿಕ ಕೇಂದ್ರಗಳು ಹಾರ್ನ್ ಮೈಕ್ ಗಳನ್ನು ಕೆಳಗೆ ಇಳಿಸುವುದು ಒಳ್ಳೇದು. ಟವರಿನಿಂದ ಮೈಕನ್ನು ಕೆಳಗಿಟ್ಟು ಸ್ಪೀಕರ್ ಬಾಕ್ಸ್ ಅನ್ನು ಬಳಸಿ ಎಂದು ಶಾಸಕ ರಘಪತಿ ಭಟ್ ಮನವಿ ಮಾಡಿದರು.
ಅವರು ಇಂದು ಮಾಧ್ಯಮಗಳಿಗೆ ಶ್ರೀ ರಾಮ್ ಸೇನೆ ಸರಕಾರ ಕ್ಕೆ ಎಚ್ಚರಿಕೆ ನೀಡಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದರು. ರಾಜ್ಯಾದ್ಯಂತ ಮೇ 9 ರಿಂದ ಭಜನೆ, ಹನುಮಾನ್ ಚಾಲೀಸ್ ಅಭಿಯಾನ ನಡೆಯಲ್ಲಿದ್ದು, ಸರ್ಕಾರಕ್ಕೆ ಭಜನಾ ಅಭಿಯಾನದ ಬಗ್ಗೆ ಶ್ರೀರಾಮಸೇನೆ ಎಚ್ಚರಿಕೆ ನೀಡಿದೆ.
ಧರ್ಮಕೇಂದ್ರದ ಸುತ್ತ ಬಂದವರಿಗೆ ಕೇಳಿದರೆ ಸಾಕು ಇಡೀ ಊರಿಗೆ ಆಜಾನ್, ಮಂತ್ರ ಭಜನೆ ಕೇಳಬೇಕಾಗಿಲ್ಲ. ದೇವಸ್ಥಾನದ ಸುಪ್ರಭಾತಕ್ಕೆ ಸಾರ್ವಜನಿಕರಿಂದ ಆಕ್ಷೇಪ ಗಳು ಇವೆ. ದೇವಸ್ಥಾನ, ಕೃಷ್ಣಮಠದ ಸುತ್ತಮುತ್ತ ಆಕ್ಷೇಪಗಳು ಇವೆ. ಹಾರ್ನ್ ಮೈಕ್ ಬದಲು ಸೌಂಡ್ ಬಾಕ್ಸ್ ಗಳನ್ನು ಉಪಯೋಗಿಸುವುದು ಸಮಸ್ಯೆ ಪರಿಹಾರವಾಗುತ್ತದೆ. ರಾಜ್ಯಾದ್ಯಂತ ಹಾರ್ನ್ ಮೈಕ್ ನಿಲ್ಲಿಸಿದರೆ ಒಳ್ಳೆಯದು. ಸೌಂಡ್ ಜಾಸ್ತಿ ಇದ್ದರೆ ಮನವೊಲಿಸುವ ಕೆಲಸ ಮಾಡೋಣ ಎಂದಿದ್ದಾರೆ.