ಮಂಗಳೂರು, ಮೇ 06 (DaijiworldNews/DB): ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಫಲ್ಗುಣಿ ನದಿಯಲ್ಲಿ ಮಾಲಿನ್ಯ ನಿಯಂತ್ರಣ ಮತ್ತು ಹೆಚ್ಚುತ್ತಿರುವ ಮೀನುಗಳ ಸಾವು ಕುರಿತು ಪರಿಶೀಲಿಸಲು ಐವರು ಸದಸ್ಯರನ್ನೊಳಗೊಂಡ ನವದೆಹಲಿ ಮೂಲದ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು ಭೇಟಿ ನೀಡಿತು.
ಸನಿಹದ ಕೈಗಾರಿಕೆಗಳಿಂದ ಮಾಲಿನ್ಯಕಾರಕ ಹೊರ ಹರಿವಿನಿಂದಾಗಿ ನದಿ ನೀರು ಕಲುಷಿತಗೊಂಡು ಮೀನುಗಳು ಸಾವನ್ನಪ್ಪಲು ಕಾರಣವಾಗಿದೆ ಎಂದು ಮಂಡಳಿ ಗಮನಿಸಿದೆ. ಪ್ರತಿದಿನ ದೈನಂದಿನ ಪರಿಶೀಲನೆ ನಡೆಸದೇ ಮಾಲಿನ್ಯಕಾರಕ ತ್ಯಾಜ್ಯಗಳನ್ನು ನೀರಿಗೆ ಬಿಡುವಂತಿಲ್ಲ. ಇದು ನೀರಿನ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆ-1974ರ ಉಲ್ಲಂಘನೆಯಾಗುತ್ತದೆ ಎಂದು ಮಂಡಳಿಯು ನಮೂದಿಸಿತು.
ಅಲ್ಲದೆ, ನದಿ ನೀರು ಮಾಲಿನ್ಯಗೊಂಡು ಮೀನುಗಳು ಸಾವನ್ನಪ್ಪದಂತೆ ತಡೆಯಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಗಮನ ಹರಿಸಬೇಕು ಎಂದು ತಿಳಿಸಲಾಯಿತು. ಒಂದು ವೇಳೆ ಮಾಲಿನ್ಯಕ್ಕೆ ಕಾರಣವಾದ ಅಂಶಗಳು ಗೊತ್ತಾದರೆ ಅಂತಹ ಕೈಗಾರಿಕೆಗಳ ವಿರುದ್ದ ನೊಟೀಸ್ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.