ವಿಟ್ಲ,ಮೇ 05 (DaijiworldNews/SM): ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವಿದ್ಯಾರ್ಥಿನಿಯ ತಾಯಿ ಅಳಲು ತೋಡಿಕೊಂಡಿದ್ದಾರೆ. ಸಾಹುಲ್ ಹಮೀದ್ ಎಂಬಾತ ನನ್ನ ಮಗಳನ್ನು ಸಾಯಿಸಿದ್ದು, ಆತನಿಗೆ ಸೂಕ್ತ ಶಿಕ್ಷೆ ನೀಡಿ ಎಂದು ಅವರು ಆಗ್ರಹಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಮೃತ ವಿದ್ಯಾರ್ಥಿನಿಯ ತಾಯಿ, ನನ್ನ ಮಗಳ ಭವಿಷ್ಯತ್ತನ್ನೇ ಆತ ಹಾಳು ಮಾಡಿದ್ದಾನೆ. ಸಾಹುಲ್ ಹಮೀದ್ ಎಂಬಾತನ ವಿರುದ್ಧ ಹೆತ್ತವರು ಆರೋಪಿಸಿದ್ದಾರೆ. ಸಾಹುಲ್ ತುಂಬಾ ಹೆಣ್ಣು ಮಕ್ಕಳನ್ನು ಹೀಗೆ ಮಾಡಿದ್ದಾನೆ. ಅವನನ್ನು ಬಂಧಿಸಬೇಕು. ಅವನಿಗೆ ಶಿಕ್ಷೆಯಾಗಬೇಕು. ನನ್ನ ಪರಿಸ್ಥಿತಿ ಮತ್ತೊಂದು ತಾಯಿಗೆ ಆಗಬಾರದು ಎಂದು ಮೃತ ವಿದ್ಯಾರ್ಥಿನಿ ಆತ್ಮೀಕಾ ತಾಯಿ ಕಣ್ಣೀರು ಹಾಕಿದ್ದಾರೆ.